ADVERTISEMENT

ಜೈಲು ಆತಿಥ್ಯ ಪ್ರಕರಣ: ಬಳ್ಳಾರಿ ಜೈಲಿನಲ್ಲಿ ದರ್ಶನ್‌ ವಿಚಾರಣೆ

ಕೇಂದ್ರ ಕಾರಾಗೃಹಕ್ಕೆ ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಚಂದ್ರಗುಪ್ತ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:16 IST
Last Updated 28 ಅಕ್ಟೋಬರ್ 2024, 16:16 IST
ಬೆಂಗಳೂರು ಜೈಲಿನಲ್ಲಿನ ವಿಶೇಷ ಆತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ರನ್ನು  ವಿಚಾರಣೆ ನಡೆಸಲು ಸೋಮವಾರ ಬಳ್ಳಾರಿ ಜೈಲಿಗೆ ಬಂದ ಚಂದ್ರಗುಪ್ತ ನೇತೃತ್ವದ ತನಿಖಾ ತಂಡ.  
ಬೆಂಗಳೂರು ಜೈಲಿನಲ್ಲಿನ ವಿಶೇಷ ಆತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ರನ್ನು  ವಿಚಾರಣೆ ನಡೆಸಲು ಸೋಮವಾರ ಬಳ್ಳಾರಿ ಜೈಲಿಗೆ ಬಂದ ಚಂದ್ರಗುಪ್ತ ನೇತೃತ್ವದ ತನಿಖಾ ತಂಡ.     

ಬಳ್ಳಾರಿ: ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿನ ವಿಶೇಷ ಆತಿಥ್ಯ ಪ್ರಕರಣದ ತನಿಖೆ ನೇತೃತ್ವ ವಹಿಸಿರುವ ಬೆಂಗಳೂರಿನ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಚಂದ್ರಗುಪ್ತ ಸೋಮವಾರ ಬಳ್ಳಾರಿ ಜೈಲಿಗೆ ಬಂದು ಪ್ರಕರಣದ ಆರೋಪಿ, ನಟ ದರ್ಶನ್‌ ಅವರ ವಿಚಾರಣೆ ನಡೆಸಿದರು. 

ಮಧ್ಯಾಹ್ನ 4ಕ್ಕೆ  ಬಳ್ಳಾರಿ ಜೈಲಿಗೆ ಚಂದ್ರಗುಪ್ತ ಭೇಟಿ ನೀಡಿದರು. ಅವರ ಬಳಿ ದರ್ಶನ್‌ರನ್ನು ಭದ್ರತಾ ಸಿಬ್ಬಂದಿ ಕರೆದೊಯ್ದರು. ಜೈಲು ಅಧೀಕ್ಷಕರ ಪಕ್ಕದ ಕೊಠಡಿಯಲ್ಲಿ ವಿಚಾರಣೆ ನಡೆಯಿತು ಎನ್ನಲಾಗಿದೆ.  

ಸರಿಸುಮಾರು 3 ಗಂಟೆ ಕಾಲ ವಿಚಾರಣೆ ನಡೆಸಿದ ಚಂದ್ರಗುಪ್ತ, 7 ಗಂಟೆಗೆ ಜೈಲಿನಿಂದ ನಿರ್ಗಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಲು ಅವರು ನಿರಾಕರಿಸಿದರು. 

ADVERTISEMENT

ವಿಶೇಷ ಆತಿಥ್ಯ ಪ್ರಕರಣದಲ್ಲಿ ದರ್ಶನ್‌ ಅವರನ್ನು ಆ. 29ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಪ್ರಕರಣ ಸಂಬಂಧ ಮೂರು ಎಫ್‌ಐಆರ್‌ ದಾಖಲಾಗಿವೆ. ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಚಂದ್ರಗುಪ್ತ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ನೀಡಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.