ADVERTISEMENT

ಜಿಂದಾಲ್‌ನಲ್ಲಿ ಉದ್ಯೋಗ ನೀಡುವಲ್ಲಿಸ್ಥಳೀಯರಿಗೆ ಅನ್ಯಾಯ: ಪರಮೇಶ್ವರನಾಯ್ಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 18:46 IST
Last Updated 17 ಜೂನ್ 2019, 18:46 IST
ಪರಮೇಶ್ವರನಾಯ್ಕ
ಪರಮೇಶ್ವರನಾಯ್ಕ   

ಹರಪನಹಳ್ಳಿ: ಜಿಂದಾಲ್ ಕಂಪನಿಯಲ್ಲಿ ಉದ್ಯೋಗ ನೀಡುವಲ್ಲಿ ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಮುಜರಾಯಿ ಹಾಗೂ ಕೌಶಲಾಭಿವೃದ್ಧಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಜನರಿಗೆ ಹೆಚ್ಚು ಉದ್ಯೋಗ ಸಿಗಬೇಕು. ಅದರಲ್ಲೂ ವಿದ್ಯಾವಂತ ಯುವಕರಿಗೆ ಉದೋಗ ನೀಡಬೇಕು. ಆದರೆ ಅದು ಆಗುತ್ತಿಲ್ಲ’ ಎಂದರು.

ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಎಸಗುವುದನ್ನು ಜಿಂದಾಲ್ ಕಂಪನಿಯವರು ನಿಲ್ಲಿಸಬೇಕು. ಜಿಂದಾಲ್ ಅಲ್ಲದೇ ಕಲ್ಯಾಣಿ, ಕಿರ್ಲೋಸ್ಕರ್... ಹೀಗೆ ಬಳ್ಳಾರಿ ಜಿಲ್ಲೆಯ ಯಾವುದೇ ಕಂಪನಿಗಳಿರಲಿ, ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಉಪ ಸಮಿತಿ ವರದಿ ನೀಡುತ್ತದೆ: ಜಿಂದಾಲ್ ಕಂಪನಿಗೆ ಸರ್ಕಾರದಿಂದ ಭೂಮಿ ಕೊಡುವ ವಿಚಾರ ಸಂಪುಟ ಸಭೆ ಮುಂದೆ ಬಂದಾಗ ಒಪ್ಪಿಗೆ ನೀಡಿದ್ದೆವು. ಈಗ ವಿರೋಧ ವ್ಯಕ್ತವಾದ ಕಾರಣಉಪ ಸಮತಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿ ಭೂಮಿ ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.