ADVERTISEMENT

ಸೋಮವಾರ ರಾತ್ರಿ ಬಿರುಸಿನ ಮಳೆ, ಜಲಾಶಯದ ಒಳಹರಿವು ಅಲ್ಪ ಇಳಿಮುಖ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 6:54 IST
Last Updated 21 ಜುಲೈ 2020, 6:54 IST
ತುಂಗಭದ್ರಾ ಜಲಾಶಯ (ಸಂಗ್ರಹ ಚಿತ್ರ)
ತುಂಗಭದ್ರಾ ಜಲಾಶಯ (ಸಂಗ್ರಹ ಚಿತ್ರ)   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಮಂಗಳವಾರ ಅಲ್ಪ ಇಳಿಮುಖಗೊಂಡಿದೆ.

ಮಂಗಳವಾರ ಒಳಹರಿವು 31,498 ಕ್ಯುಸೆಕ್‌ ದಾಖಲಾಗಿದೆ. ಸೋಮವಾರ 33,022 ಕ್ಯುಸೆಕ್‌ ಒಳಹರಿವು ಇತ್ತು. ಭಾನುವಾರ 17,138 ಕ್ಯುಸೆಕ್‌, ಶನಿವಾರ 6,153 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಸತತ ಎರಡು ದಿನಗಳಿಂದ ಏರುಮುಖದಲ್ಲಿದ್ದ ಒಳಹರಿವು ಈಗ ಸ್ವಲ್ಪ ತಗ್ಗಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,608.50 ಅಡಿ ನೀರಿನ ಸಂಗ್ರಹವಿದೆ. 288 ಕ್ಯುಸೆಕ್‌ ಹೊರಹರಿವು ಇದೆ.

ADVERTISEMENT

ಬಿರುಸಿನ ಮಳೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಸೋಮವಾರ ರಾತ್ರಿ ಬಿರುಸಿನ ಮಳೆಯಾಗಿದೆ. ಭಾನುವಾರ ರಾತ್ರಿಯೂ ಮಳೆಯಾಗಿತ್ತು. ಹಗಲಲ್ಲಿ ಬಿಡುವು ಕೊಡುತ್ತಿರುವ ಮಳೆ ರಾತ್ರಿ ಸುರಿಯುತ್ತಿದೆ. ಮಂಗಳವಾರ ಬೆಳಿಗ್ಗೆಯಿಂದ ಕಾರ್ಮೋಡ ಕವಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.