ADVERTISEMENT

ಬಳ್ಳಾರಿ: ಮಳೆಗೆ 21 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:25 IST
Last Updated 13 ಜೂನ್ 2024, 14:25 IST
ಬಳ್ಳಾರಿಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿರುವುದು
ಬಳ್ಳಾರಿಯಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿರುವುದು   

ಬಳ್ಳಾರಿ: ಜಿಲ್ಲೆಯಲ್ಲಿ ಬುಧುವಾರ ದಿನವಿಡೀ 2.65 ಸೆಂಟಿ ಮೀಟರ್‌ನಷ್ಟು ಮಳೆಯಾಗಿದ್ದು, ಒಟ್ಟಾರೆ 21 ಮನೆಗಳು ಭಾಗಶಃ ಹಾನಿಯಾಗಿವೆ. 

ಬಳ್ಳಾರಿ ತಾಲೂಕಿನಲ್ಲಿ 10, ಸಂಡೂರು –5, ಕಂಪ್ಲಿ–4 ಸಿರುಗುಪ್ಪ–2 ಮನೆಗಳಿಗೆ ಭಾಗಶಃ ಹಾನಿಯಾಗಿರುವುದಾಗಿ ‘ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಜಿಲ್ಲೆಯಲ್ಲಿ ಬುಧವಾರದ ವಾಡಿಕೆ ಮಳೆ 0.18 ಸೆಂ.ಮೀ ಆಗಬೇಕಿತ್ತು. ಆದರೆ, ಒಟ್ಟಾರೆ 2.65 ಸೆಂ.ಮೀ.ನಷ್ಟು ಮಳೆಯಾಗಿದೆ. ಇದು ವಾಡಿಕೆಗಿಂತಲೂ ಅತಿಹೆಚ್ಚು ಎಂಬುದು ಅಂಕಿಅಂಶಗಳಿಂದ ಗೊತ್ತಾಗಿದೆ. ಗುರುವಾರವೂ ಮಳೆ ಮುಂದುವರಿದಿತ್ತು.

ADVERTISEMENT

ಮಳೆ ವಿವರ (ಗುರುವಾರ ಬೆಳಿಗ್ಗೆ 8.30 ರಿಂದ 24 ಗಂಟೆ) ತಾಲ್ಲೂಕು;ವಾಡಿಕೆ;ವಾಸ್ತವ ಬಳ್ಳಾರಿ;0.1;1.77 ಸಂಡೂರು;0.04;1.50 ಸಿರುಗುಪ್ಪ;0.11;4.45 ಕುರುಗೋಡು;0.31;3.63 ಕಂಪ್ಲಿ;0.12;3.11 ಒಟ್ಟು;0.18;2.65

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.