ADVERTISEMENT

ಒಳಮೀಸಲಾತಿಗೆ ಕೂಡಲೇ ಕ್ರಮವಹಿಸಿ: ಕೆ.ಎಂ.ಜಯಗೋಪಾಲ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:36 IST
Last Updated 13 ನವೆಂಬರ್ 2024, 14:36 IST
ಕೆ.ಎಂ.ಜಯಗೋಪಾಲ್
ಕೆ.ಎಂ.ಜಯಗೋಪಾಲ್   

ಕುರುಗೋಡು: ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಮಾದಾರ ಚನ್ನಯ್ಯ ಸೇವೆ ರಾಜ್ಯ ಸಮಿತಿ ಅಧ್ಯಕ್ಷ ಕೆ.ಎಂ.ಜಯಗೋಪಾಲ್ ಒತ್ತಾಯಿಸಿದರು.

ಪಟ್ಟದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಲಹರಣ ಮಾಡಲು ಆಯೋಗ ರಚಿಸಲು ಮುಂದಾಗಿರುವುದು ಸೂಕ್ತವಲ್ಲ. ನ್ಯಾ. ಸದಾಶಿವ ಆಯೋಗ ನೀಡಿದ ಶಿಫಾರಸಿನಂತೆ 2011ರ ಜನಗಣತಿಯ ಆಧಾರದ ಮೇಲೆ ಕೂಡಲೇ ಒಳಮೀಸಲಾತಿಗೆ ಒಪ್ಪಿಗೆ ಸೂಚಿಸದಿದ್ದರೆ ಮುಂದಿನದ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ವಕೀಲ ದೊಡ್ಡಯ್ಯ, ತಿಮ್ಮಪ್ಪ, ಕಲ್ಲುಕಂಭ ಹನುಮಂತಪ್ಪ, ಮಹಾಲಿಂಗಪ್ಪ, ತಿಮ್ಮಪ್ಪ, ವಿ.ಕೆ.ಬಸವರಾಜ, ಲಿಂಗರಾಜ, ಎಸ್.ಬಸವರಾಜ, ವದ್ದಟ್ಟಿ ಹುಲೆಪ್ಪ, ಯುವರಾಜ ಮತ್ತು ಚಿದಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.