ADVERTISEMENT

ಸಹಕಾರ ಕ್ಷೇತ್ರದಲ್ಲಿ ರೈತರ ಸೇವೆ ಮಾಡಿದ ತೃಪ್ತಿ: ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:22 IST
Last Updated 24 ನವೆಂಬರ್ 2024, 16:22 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಡವಿಆನಂದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಸಹಕಾರಿ ಮಾರಾಟ ಮಳಿಗೆಗಳನ್ನು ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮನಾಯ್ಕ, ಬಿಡಿಸಿಸಿ ಅಧ್ಯಕ್ಷ ತಿಪ್ಪೇಸ್ವಾಮಿ ಉದ್ಘಾಟಿಸಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಡವಿಆನಂದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಸಹಕಾರಿ ಮಾರಾಟ ಮಳಿಗೆಗಳನ್ನು ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮನಾಯ್ಕ, ಬಿಡಿಸಿಸಿ ಅಧ್ಯಕ್ಷ ತಿಪ್ಪೇಸ್ವಾಮಿ ಉದ್ಘಾಟಿಸಿದರು   

ಹಗರಿಬೊಮ್ಮನಹಳ್ಳಿ: ‘ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಸಹಾಯ, ಸೇವೆ ಮಾಡಿದ ಮತ್ತು ಅವರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡ ತೃಪ್ತಿ ನನಗಿದೆ’ ಎಂದು ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮನಾಯ್ಕ ಹೇಳಿದರು.

ತಾಲ್ಲೂಕಿನ ಬಾಚಿಗೊಂಡನಹಳ್ಳಿಯಲ್ಲಿ ಭಾನುವಾರ ವಿವಿಧೋದ್ಧೇಶ ಗ್ರಾಮೀಣ ಕೃಷಿಪತ್ತಿನ ಸಹಕಾರ ಸಂಘದ ಶಾಖಾ ಕಚೇರಿಯ ನೂತನ ಕಟ್ಟಡ ಮತ್ತು ಅತಿಥಿಗೃಹ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರಕ್ಕೆ ಕಾಲಿಡಲು ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು ಕಾರಣ. ಸಹಕಾರ ಕ್ಷೇತ್ರದಲ್ಲಿ ಎಂದೂ ರಾಜಕೀಯ ಮಾಡಿಲ್ಲ. ವಿರೋಧ ಪಕ್ಷದವರು ಪ್ರತಿನಿಧಿಗಳಾಗಿ ಬಂದರೂ ಸ್ವಾಗತ ಮಾಡಿದ್ದೇನೆ. ಸಹಕಾರ ಕ್ಷೇತ್ರಕ್ಕೆ ಬಂದು 7 ವರ್ಷಗಳಾಗಿವೆ. ಆದರೆ ಇನ್ನೂ ಸಮಗ್ರವಾಗಿ ತಿಳಿದುಕೊಳ್ಳಲಾಗಿಲ್ಲ, ಇದೊಂದು ಸಮುದ್ರ ಇದ್ದಂತೆ ಎಂದರು.

ADVERTISEMENT

ಕೌದಿಮಹಾಂತೇಶ್ವರ ಮಠದ ಶಿವಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ದಾರುಕೇಶ್, ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ಮುಖಂಡರಾದ ಲೋಕಪ್ಪ, ಗಜೇಂದ್ರ, ಸಣ್ಣ ಬಸಪ್ಪ, ಮಹೇಶ್, ಮೇಘರಾಜ್, ಕರಿಬಸಪ್ಪ, ಮಾಯಪ್ಪ ಧರ್ಮಪ್ಪ, ಸಂಘದ ಮುಖ್ಯ ಕಾರ್ಯನಿರ್ವಾಹಕ ಶರಣಬಸಪ್ಪ ಇದ್ದರು.

ಬಳಿಕ ಅಡವಿಆನಂದೇವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ್ದ ಸಹಕಾರಿ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.