ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು, ನೀನೆನ್ನ ಜಡಿದೊಮ್ಮೆ ನುಡಿಯದಿರ! ನೀ ನನ್ನಂತೆ ಒಡಲುಗೊಂಡು ನೋಡ ರಾಮನಾಥ.
ಈ ವಚನ ಜೇಡರ ದಾಸಿಮಯ್ಯನವರದು. ಮನುಷ್ಯನ ಬದುಕನ್ನು ಈ ವಚನದಲ್ಲಿ ದೇವರಿಗೆ ಹೋಲಿಸಿ ಸ್ಪಷ್ಟೀಕರಣವನ್ನು ನೀಡುತ್ತಾ ಬರುತ್ತಾರೆ. ಇವರು ನಿವೇದಿಸುವ ಹಸುವಿನ ಪ್ರಸಂಗ ಎಷ್ಟು ಕಷ್ಟ ಎಂಬುದು ಗೊತ್ತಾಗಬೇಕಾದರೆ, ಹೋದವನೇ ನೀನು ಒಮ್ಮೆ ಹೊಟ್ಟೆಯನ್ನು ಹೊತ್ತುಕೊಂಡು ಅಥವಾ ಈ ಭೂಮಿಗೆ ಜನಿಸಿದ ನಮ್ಮ ಕಷ್ಟ ಎಂಥದು ಎಂಬುದು ನಿಮಗೆ ತಿಳಿಯುತ್ತದೆ.
ವ್ಯಾಪಕವಾದ ಮೋಹವನ್ನು ತೊರೆದವನೇ ಶರಣ, ಪರಮ ವಸ್ತುವಿನ ಜ್ಞಾನ ಸ್ವರೂಪವನ್ನು ತಿಳಿಯುವಂಥ ವಿವೇಕ ಭಾವ ಮನುಷ್ಯನಿಗೆ ಬರಬೇಕಾದರೆ, ಹಸುವಿನ ಕಾರಣ ಮೇಲ್ನೋಟಕ್ಕೆ. ಆದರೆ, ಜ್ಞಾನದ ಹಸಿವು ಬಹಳ ಮುಖ್ಯ. ಶರಣನ ವಚನ ಎರಡು ಅರ್ಥಗಳನ್ನು ಬಿಂಬಿಸುತ್ತದೆ.
-ಹಿರಿಶಾಂತವೀರ ಮಹಾಸ್ವಾಮೀಜಿ, ಗವಿಮಠ, ಹೂವಿನಹಡಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.