ADVERTISEMENT

ಕೂಸಿನ ಮನೆ: ವರ್ಷಪೂರ್ತಿ ಕಾರ್ಯ ನಿರ್ವಹಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:45 IST
Last Updated 21 ನವೆಂಬರ್ 2024, 15:45 IST
ಕುರುಗೋಡು ತಾಲ್ಲೂಕಿನ ಕಲ್ಲುಕಂಭ ಗ್ರಾಮದ ಕೂಸಿನ ಮನೆಗೆ ಬೆಂಗಳೂರಿನ ಮೊಬೈಲ್ ಕ್ರಸ್ ಸಂಸ್ಥೆಯ ಭವಾನಿ ಮತ್ತು ತಂಡ ಗುರುವಾರ ಭೇಟಿನೀಡಿ ಪರಿಶೀಲಿಸಿತು
ಕುರುಗೋಡು ತಾಲ್ಲೂಕಿನ ಕಲ್ಲುಕಂಭ ಗ್ರಾಮದ ಕೂಸಿನ ಮನೆಗೆ ಬೆಂಗಳೂರಿನ ಮೊಬೈಲ್ ಕ್ರಸ್ ಸಂಸ್ಥೆಯ ಭವಾನಿ ಮತ್ತು ತಂಡ ಗುರುವಾರ ಭೇಟಿನೀಡಿ ಪರಿಶೀಲಿಸಿತು   

ಕುರುಗೋಡು: ಬೆಂಗಳೂರಿನ ಮೊಬೈಲ್ ಕ್ರಸ್ ಸಂಸ್ಥೆಯ ಭವಾನಿ ಮತ್ತು ತಂಡ ತಾಲ್ಲೂಕಿನ ಕಲ್ಲುಕಂಭ ಮತ್ತು ಎಚ್.ವೀರಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನರೇಗಾ ಕೂಸಿನ ಮನೆಗೆ ಗುರುವಾರ ಭೇಟಿ ನೀಡಿ ಕಾರ್ಯಚಟುವಟಿಕೆ ಪರಿಶೀಲನೆ ನಡೆಸಿತು.

ಕೂಸಿನ ಮನೆಯಲ್ಲಿಯೇ ಅಡುಗೆ ಮನೆ ಇರುವುದು ಮತ್ತು ಮಕ್ಕಳಸ್ನೇಹಿ ಶೌಚಾಲಯ ಇಲ್ಲದಿರುವುದು ಕಂಡು ಸಿಡಿಮಿಡಿಗೊಂಡರು.

ಪ್ರತ್ಯೇಕ ಅಡುಗೆ ಮನೆ ಮತ್ತು ಮಕ್ಕಳಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಕೂಡಲೇ ಕ್ರಮಕೈಒಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಕುಸಿನ ಮನೆ ಕೇವಲ ಮೂರು ತಿಂಗಳು ಮಾತ್ರ ಕಾರ್ಯನಿರ್ವಹಿಸುವುದರಿಂದ ಪ್ರಯೋಜನವಿಲ್ಲ. ವರ್ಷದ 12 ತಿಂಗಳು ಕಾರ್ಯನಿರ್ವಹಿಸಬೇಕು. ಮನೆಯಲ್ಲಿ ಜರುಗುವ ಕಾರ್ಯಚಟುವಟಿಕೆ, ವಿತರಿಸುವ ಪೌಷ್ಟಿಕ ಆಹಾರ ಕುರಿತು ಪ್ರತಿನಿತ್ಯ ಪುಸ್ತಕಗಳಲ್ಲಿ ದಾಖಲು ಮಾಡಬೇಕು ಎಂದು ಸೂಚಿಸಿದರು.

ಮಕ್ಕಳ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಕೂಸಿನ ಮನೆಯಲ್ಲಿಕಾರ್ಯನಿರ್ವಗಿಸುವ ಕೇರ್ ಟೇಕರ್ಸ್ ಮೂರು ತಿಂಗಳು ಮಾತ್ರ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ವರ್ಷದ 12 ತಿಂಗಳು ಕೊಡಬೇಕು ಮತ್ತು ಈಗ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು ಎಂದು ತಾಲ್ಲೂಕಿನ ಕಲ್ಲುಕಂಭ ಗ್ರಾಮದ ಕುಸಿನಮನೆ ಕೇರ್ ಟೇಕರ್ಸ್ ಉಮಾದೇವಿ ಭೇಟಿನೀಡಿದ ತಂಡದ ಸದಸ್ಯರಲ್ಲಿ ಮನವಿಮಾಡಿದರು.

ತಾಲ್ಲೂಕು ಪಂಚಾಯಿತಿ ಇಒ ಕೆವಿ. ನಿರ್ಮಲಾ, ಕಚೇರಿ ವ್ಯವಸ್ಥಾಪಕ ಅನೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ, ಅಭಿವೃದ್ದಿ ಅಧಿಕಾರಿ ದೇವರಾಜ್, ಐಇಸಿ ಸಂಮಯೋಜಕ ಚಂದ್ರಶೇಖರ್, ಅಂಗನವಾಡಿ ಮೇಲ್ವಿಚಾರಕಿ ಎರೆಮ್ಮ ಮತ್ತು ಜ್ಯೋತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.