ಬಳ್ಳಾರಿ: ‘ವಿದ್ಯಾರ್ಥಿಗಳ ಸಂಖ್ ಯೆಕಡಿಮೆ ಆಗುತ್ತಿರುವುದರಿಂದ ಮುಂದಿನ ಹತ್ತು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆ ಇದೆ ಎಂದು ಸರ್ಕಾರವೇ ಹೇಳಿದೆ’ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಕಳವಳ
ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸಿರಿಗೇರಿ ಅನ್ನಪೂರ್ಣ ಪ್ರಕಾಶನ ಏರ್ಪಡಿಸಿದ್ದ `ಕನ್ನಡ ಕಾವಲಿಗೆ ಸಾಕ್ಷಿಕಲ್ಲು' ಕೃತಿಯ ಬಿಡುಗಡೆ ಕಾರ್ಯಕ್ರಮ
ದಲ್ಲಿ ಮಾತನಾಡಿದ ಅವರು, ‘ಇದು ಸರ್ಕಾರವೇ ನೀಡಿರುವ ಅಂಕಿ ಅಂಶ. ಕರ್ನಾಟಕ ಬಿಟ್ಟರೆ ದೇಶದಲ್ಲಿ ಎಲ್ಲಿಯೂ ರಾಜ್ಯಭಾಷೆಯ ಅಭಿವೃದ್ಧಿಗಾಗಿ ಮಂಡಳಿ, ಪ್ರಾಧಿಕಾರಗಳಿಲ್ಲ. ಆದಾಗ್ಯೂ, ಕನ್ನಡಕ್ಕೆ, ಕನ್ನಡ ಶಾಲೆಗಳಿಗೆ ದುಸ್ಥಿತಿ ಒದಗಿದೆ. ನಮ್ಮ ಭಾಷೆಯನ್ನು ನಾವೇ ಅಭಿವೃದ್ಧಿ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ’ ಎಂದರು.
‘ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಈ ರೀತಿಯ ಪರಿಸ್ಥಿತಿಯಿಲ್ಲ. ಆ ರಾಜ್ಯಗಳಲ್ಲಿ ಸಹಜವಾಗಿಯೇ ರಾಜ್ಯಭಾಷೆ ಪ್ರಗತಿ ಕಂಡಿದೆ. ನಮ್ಮಲ್ಲಿ ಮಾತ್ರ ಆಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂಗ್ಲಿಷ್ ಶಾಲೆಯಲ್ಲಿ ಓದಿದರೆ ಮಾತ್ರ ಸರ್ಕಾರಿ ಕೆಲಸ ಸಿಗಲಿದೆ ಎನ್ನುವ ಭ್ರಮೆ ಪೋಷಕರಿಗೆ ಇದೆ. ಅವರು ಮೊದಲು ಅದರಿಂದ ಹೊರಬರಬೇಕು’ ಎಂದು ಎಲ್.ಹನುಮಂತಯ್ಯ ಅವರು ಪ್ರತಿಪಾದಿಸಿದರು.
ಇಲ್ಲೇ ಸಾಯುವೆ: ಕಾರ್ಯಕ್ರಮ ದಲ್ಲಿ ಮಾತನಾಡಿದ ಲೇಖಕ ಕುಂ. ವೀರಭದ್ರಪ್ಪ, ‘ಅನೇಕ ಲೇಖಕರು ಬೆಂಗಳೂರು, ಧಾರವಾಡ, ಶಿವಮೊಗ್ಗ ನೋಡಿಕೊಂಡರು. ನಾನು ನಮ್ಮೂರು ಕೊಟ್ಟೂರಿನಲ್ಲೇ ಉಳಿದಿರುವೆ. ಇಲ್ಲಿಯೇ ಸಾಯುವೆ’ ಎಂದು ಅವರು
ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.