ADVERTISEMENT

ರಕ್ಷಣಾ ಸಿಬ್ಬಂದಿಗೆ ಮಾರುವ ಬಾಟಲಿಗಳ ಅಕ್ರಮ ದಾಸ್ತಾನು: ₹4 ಲಕ್ಷ ಮೌಲ್ಯದ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 15:27 IST
Last Updated 28 ಮಾರ್ಚ್ 2023, 15:27 IST
ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯದ ಬಾಟಲಿಗಳನ್ನು ಅಬಕಾರಿ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯದ ಬಾಟಲಿಗಳನ್ನು ಅಬಕಾರಿ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.   

ಬಳ್ಳಾರಿ: ಇಲ್ಲಿನ ವಿದ್ಯಾನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ನಮೂನೆಯ ದುಬಾರಿ ಮದ್ಯವನ್ನು ಜಪ್ತಿ ಮಾಡಿ ಒಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಈಶ್ವರ್ ರವಿಚಂದ್ರ ಬಿನ್‌ ಲಕ್ಷ್ಮೀನಾರಾಯಣ ತಮ್ಮ ಮನೆಯಲ್ಲಿ ರಕ್ಷಣಾ ಸಿಬ್ಬಂದಿಗೆ ಮಾರಬೇಕಿದ್ದ 142 ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿದ್ದರು ಎಂದು ಬಳ್ಳಾರಿ ಜಿಲ್ಲೆ ಅಬಕಾರಿ ಉಪ ಆಯುಕ್ತ ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

750 ಮಿ.ಲೀ ಸಾಮರ್ಥ್ಯದ 142 ಬಾಟಲಿಗಳಲ್ಲಿ ಒಟ್ಟು 106.500 ಲೀಟರ್‌ ಮದ್ಯ ಇದ್ದು, ಇದರ ಮಾರುಕಟ್ಟೆ ಬೆಲೆ ₹ 4,01,166. ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಉಪ ಆಯುಕ್ತರು ಹೇಳಿದ್ದಾರೆ.

ADVERTISEMENT

ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ, ಉಪ ನಿರೀಕ್ಷಕರಾದ ರುದ್ರೇಗೌಡ, ಗೌಡಪ್ಪ, ಕಾನ್‌ಸ್ಟೆಬಲ್‌ಗಳಾದ ಖಾಜಾ ಹುಸೇನ್‌ ಪೀರನ್‌, ಸದ್ದಾಂ ಹುಸೇನ್‌ ಮತ್ತು ವಾಹನ ಚಾಲಕಿ ಗಾಯತ್ರಿ ಮತ್ತಿತರರು ಈ ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.