ADVERTISEMENT

ಬಳ್ಳಾರಿ ಲೋಕಸಭೆ ಕ್ಷೇತ್ರ: ಮತದಾನಕ್ಕೆ ಪೂರಕ 'ವಾತಾವರಣ'!

​ಪ್ರಜಾವಾಣಿ ವಾರ್ತೆ
Published 7 ಮೇ 2024, 2:16 IST
Last Updated 7 ಮೇ 2024, 2:16 IST
<div class="paragraphs"><p>ಮತ ಚಲಾಯಿಸಲು ಜನ  ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು.</p><p></p></div>

ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು.

   

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ADVERTISEMENT

ಮತ ಚಲಾಯಿಸಲು ಜನ ಮತಗಟ್ಟೆ ಕೇಂದ್ರಗಳಿಗೆ ತೆರಳುತ್ತಿರುವ, ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು.

ಜಿಲ್ಲೆಯಲ್ಲಿ ಇಂದು ಮೋಡಕವಿದಿದ್ದು, ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ. ಇದು ಮತದಾನಕ್ಕೆ ಪೂರಕವಾಗಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ‌. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ 45 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ದಾಖಲಾಗಿತ್ತು. ಬಿಸಿಲ ಬೇಗ ಮತದಾನದ ಮೇಲೆ ಪರಿಣಾಮ ಬೀರುವ ಆತಂಕವಿತ್ತು.

1972 ಮತಗಟ್ಟೆ

ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 1972 ಮತಗಟ್ಟೆಗಳಿಗೆ, 2506 – ಬ್ಯಾಲೆಟ್ ಯುನಿಟ್, 2767 ಕಂಟ್ರೋಲ್ ಯುನಿಟ್‌ ಮತ್ತು 2630 ವಿ.ವಿ.ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ.

18,84,469 ಮತದಾರರು

ಬಳ್ಳಾರಿ (ವಿಜಯನಗರ ಒಳಗೊಂಡಂತೆ) ಲೋಕಸಭೆ ಕ್ಷೇತ್ರದಲ್ಲಿ 92,92,74 ಪುರುಷ ಮತದಾರರು ಮತ್ತು 9,54,929 ಮಹಿಳಾ ಮತದಾರರು, 266 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 18,84,469 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 61,006 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ 29ನೇ ಮತಕೇಂದ್ರದಲ್ಲಿ ಪ್ರಿಯಾಂಕ ಎಂಬುವವರು ಮೊದಲ ಮತ ಚಲಾಯಿಸಿ ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.