ADVERTISEMENT

ಕಡಿಮೆ ಮತದಾನ: ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 15:37 IST
Last Updated 30 ಮಾರ್ಚ್ 2024, 15:37 IST
ಕಂಪ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಎಲ್‍ಒ, ಮತಗಟ್ಟೆ ಮೇಲ್ವಿಚಾರಕರು, ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ತಹಶೀಲ್ದಾರ್ ಶಿವರಾಜ, ತಾ.ಪಂ ಇಒ ಆರ್.ಕೆ. ಶ್ರೀಕುಮಾರ, ನರೇಗಾ ಎಡಿ ಕೆ.ಎಸ್. ಮಲ್ಲನಗೌಡ ಭಾಗವಹಿಸಿದ್ದರು
ಕಂಪ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಎಲ್‍ಒ, ಮತಗಟ್ಟೆ ಮೇಲ್ವಿಚಾರಕರು, ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ತಹಶೀಲ್ದಾರ್ ಶಿವರಾಜ, ತಾ.ಪಂ ಇಒ ಆರ್.ಕೆ. ಶ್ರೀಕುಮಾರ, ನರೇಗಾ ಎಡಿ ಕೆ.ಎಸ್. ಮಲ್ಲನಗೌಡ ಭಾಗವಹಿಸಿದ್ದರು   

ಕಂಪ್ಲಿ: ತಾಲ್ಲೂಕಿನಲ್ಲಿ ಕಡಿಮೆ ಮತದಾನ ಆಗಿರುವ ಪ್ರದೇಶಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ತಹಶೀಲ್ದಾರ್ ಶಿವರಾಜ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಎಲ್‍ಒ, ಮತಗಟ್ಟೆ ಮೇಲ್ವಿಚಾರಕರು ಮತ್ತು ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮತದಾರರ ಜಾಗೃತಿ ಚಟುವಟಿಕೆಗಳನ್ನು ಬೂತ್ ಮಟ್ಟದಿಂದ ಚುರುಕುಗೊಳಿಸುವಂತೆಯೂ ಮನವಿ ಮಾಡಿದರು.

ಮತದಾನ ಜಾಗೃತಿಗಾಗಿ ಏಪ್ರಿಲ್‌ 3ರಂದು ಸೈಕಲ್ ಜಾಥಾ ಮತ್ತು ಏ.7ರಂದು ಅಂಗವಿಕಲ ತ್ರಿಕಚಕ್ರವಾಹನ ಜಾಥಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸುವಂತೆ ತಿಳಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ಆರ್.ಕೆ. ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್. ಮಲ್ಲನಗೌಡ, ಪುರಸಭೆ ಮುಖ್ಯಾಧಿಕಾರಿ ಗೋರೆಬಾಲ್ ರೆಡ್ಡಿ ರಾಯನಗೌಡ, ಶಿಕ್ಷಕ ಎಂ.ಎ. ನಾಗನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಪಿ. ಬಸವರಾಜ, ನಗರ ಪುನರ್ವಸತಿ ಕಾರ್ಯಕರ್ತ ಜಿ. ರಮೇಶ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಕಾಳಮ್ಮ, ಮಂಜುನಾಥ, ಮಲ್ಲೇಶ್, ಪ್ರಶಾಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.