ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಸುಕ್ಷೇತ್ರ ಮುಖ್ಯರಸ್ತೆಯನ್ನು ಅತಿಕ್ರಮಿಸಿದ್ದ 17 ಡಬ್ಬಾ ಅಂಗಡಿಗಳನ್ನು ಗ್ರಾಮ ಪಂಚಾಯಿತಿಯವರು ಮಂಗಳವಾರ ತೆರವುಗೊಳಿಸಿದರು.
ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯಿತಿ ಕಚೇರಿ ಕಾಣದಂತೆ ಅಡ್ಡಲಾಗಿ ಇರಿಸಿದ್ದ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು. ರಸ್ತೆ ಅತಿಕ್ರಮಿಸಿದ ಶೆಡ್ ಗಳಿಂದ ಸುಕ್ಷೇತ್ರದಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರು. ಈ ಕುರಿತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಅತಿಕ್ರಮಿಸಿದವರಿಗೆ ನೋಟಿಸ್ ನೀಡಲಾಗಿತ್ತು.
‘ಸುಕ್ಷೇತ್ರದ ಮುಖ್ಯ ರಸ್ತೆಗಳನ್ನು ಅತಿಕ್ರಮಿಸಿ ಶೆಡ್ ಗಳನ್ನು ಇರಿಸಿರುವುದರಿಂದ ಸಂಚಾರ ಕಿರಿಕಿರಿ ಉಂಟಾಗಿತ್ತು. ತಾಲ್ಲೂಕು ಪಂಚಾಯಿತಿ ಇಒ ಮಾರ್ಗದರ್ಶನದಲ್ಲಿ ಅವುಗಳನ್ನು ತೆರವುಗೊಳಿಸಿದ್ದೇವೆ. ಬಸ್ ನಿಲ್ದಾಣ ಮುಂಭಾಗದ ಶೆಡ್ ತೆರವಿಗೆ ಸಾರಿಗೆ ಘಟಕದವರು ಪತ್ರ ಬರೆದಿದ್ದು, ಸಭೆಯಲ್ಲಿ ಚರ್ಚಿಸಿ ಸುಕ್ಷೇತ್ರ ವ್ಯಾಪ್ತಿಯ ಎಲ್ಲ ರಸ್ತೆಗಳ ಅತಿಕ್ರಮ ತೆರವು ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಪಿಡಿಒ ಬಸವರಾಜ ಸಂಶಿ ತಿಳಿಸಿದರು.
ಗ್ರಾ.ಪಂ. ಕಾರ್ಯದರ್ಶಿ ಜಿ.ಬಸವರಾಜ, ಸಿಬ್ಬಂದಿ ಉಚ್ಚಂಗೆಪ್ಪ, ಉಮೇಶ್, ಪ್ರಭು, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.