ADVERTISEMENT

ಬಳ್ಳಾರಿ | ಹಣ ದುರ್ಬಳಕೆ: ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 29 ಮೇ 2024, 23:58 IST
Last Updated 29 ಮೇ 2024, 23:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಳ್ಳಾರಿ: ಗ್ರಾಹಕರಿಗೆ ಗೊತ್ತಾಗದಂತೆ ಅವರ ಖಾತೆಗಳಿಂದ ಸಾಲ ಮಂಜೂರು ಮಾಡಿಕೊಂಡು, ಸ್ವಂತಕ್ಕೆ ಬಳಸಿದ ಆರೋಪದ ಮೇಲೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಿದ್ದಮ್ಮನಹಳ್ಳಿಯ ಶಾಖೆಯ ಇಬ್ಬರು ಅಧಿಕಾರಿಗಳ ವಿರುದ್ಧ ಕುಡುತಿನಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. 

ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಹನುಮಂತರಾಯ ಗಿರಿಡ್ಡಿ ಅವರು ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಗಳಾದ ವ್ಯವಸ್ಥಾಪಕ ಬಿ. ನವೀನ್‌ ಕುಮಾರ್‌ ಮತ್ತು ಸಹಾಯಕ ವ್ಯವಸ್ಥಾಪಕ ಕನ್ನ ಸುರೇಶ್‌ ಬಾಬು ಎಂಬುವರ ವಿರುದ್ಧ ‌ನಂಬಿಕೆ ದ್ರೋಹ, ವಂಚನೆ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

‘ಈ ಇಬ್ಬರೂ ಅಧಿಕಾರಿಗಳು 2022–2023ನೇ ಸಾಲಿನಲ್ಲಿ 11 ಗ್ರಾಹಕರ ಹೆಸರಿನಲ್ಲಿ ಒಟ್ಟು ₹16.55 ಲಕ್ಷ ಸಾಲ ಮಂಜೂರು ಮಾಡಿಕೊಂಡು, ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕನ್ನ ಸುರೇಶ್ ಬಾಬು ಇಸಿಒಡಿ ಸಾಲದ ಖಾತೆಗೆ ಅನಧಿಕೃತವಾಗಿ ಹಣ ಜಮಾ ಮಾಡಿ, ಪತ್ನಿ ಶ್ರೀವೇಣಿ ಅವರ ಉಳಿತಾಯ ಖಾತೆಗೆ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.