ಹರಪನಹಳ್ಳಿ : ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಇಬ್ಬರು ಪುತ್ರಿಯರು ಶುಕ್ರವಾರ ಪರಸ್ಪರ ಭೇಟಿಯಾಗಿ ಚರ್ಚಿಸಿರುವುದು ಕ್ಷೇತ್ರದ ರಾಜಕಾರಣದಲ್ಲಿ ಕುತೂಹಲ ಹುಟ್ಟುಹಾಕಿದೆ.
ಶುಕ್ರವಾರ ಸಂಜೆ ಎಂ.ಪಿ.ವೀಣಾ ಮತ್ತು ಡಾ.ಮಹಾಂತೇಶ್ ಚರಂತಿ ಮಠ ಕುಟುಂಬ ಕಾಶಿಮಠ ಸಂಗಮೇಶ್ವರ ಬಡಾವಣೆಯಲ್ಲಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರ ಮನೆಗೆ ಆಗಮಿಸಿ ಕೆಲವೊತ್ತು ಚರ್ಚಿಸಿ ತೆರಳಿರುವುದು ಇಬ್ಬರು ಬೆಂಬಲಿಗರ ಸಂತಸಕ್ಕೆ ಕಾರಣವಾಗಿದೆ. ಇವರಿಬ್ಬರ ಬೇಟಿ ಹೂವಿನ ಹಡಗಲಿ ಮತ್ತು ಹರಪನಹಳ್ಳಿ ರಾಜಕಾರಣದಲ್ಲಿ ಬದಲಾವಣೆಗೂ ಕಾರಣವಾಗುವ ಸಾಧ್ಯತೆ ಇದೆ
ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನರಾದ ಕೆಲವು ದಿನಗಳ ನಂತರ ಸಹೋದರಿಯರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಇಬ್ಬರು ಕಾಂಗ್ರೆಸ್ ಪಕ್ಷದ ರಾಜ್ಯ ಸಮಿತಿಯಲ್ಲಿ ಹುದ್ದೆ ಪಡೆದು ಹರಪನಹಳ್ಳಿಯಲ್ಲಿ ಪ್ರತ್ಯೇಕ ಜನಸಂಪರ್ಕ ಕಚೇರಿ ತೆರೆದಿದ್ದರು.ಆ ಮೂಲಕ ತಮ್ಮ ತಮ್ಮ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡು ಪಕ್ಷ ಸಂಘಟನೆಗೆ ಒತ್ತುಕೊಟ್ಟಿದ್ದರು. ಆದರೆ ತಮ್ಮ ತಂದೆ ದಿವಂಗತ ಎಂ.ಪಿ.ಪ್ರಕಾಶ್ ಮತ್ತು ಸಹೋದರ ದಿವಂಗತ ಎಂ.ಪಿ.ರವೀಂದ್ರರ ಹುಟ್ಟು ಹಬ್ಬ, ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಆಚರಿಸುತ್ತಾ ಬಂದಿದ್ದರು.

ಕೆಲ ತಿಂಗಳ ಹಿಂದೆ ಪಟ್ಟಣದ ಎಡಿಬಿ ಕಾಲೇಜ್ ಬಳಿ ನಡೆದ ಎಂ.ಪಿ.ಲತಾ ಮತ್ತು ಎಚ್.ಎಂ.ಮಲ್ಲಿಕಾರ್ಜುನ್ ಅವರ ಪುತ್ರನ ಮದುವೆ ಅರತಕ್ಷತೆಯಲ್ಲಿ ಕಾಣಿಸಿಕೊಂಡ ನಂತರವೂ ಸಂಬಂಧ ಮುಂದುವರೆಸಿರಲಿಲ್ಲ. ಈಚೆಗೆ ಕೆಪಿಸಿಸಿ ಟಿಕೆಟ್ ಹಂಚಿಕೆ ಮಾಡುವಾಗ ಎಂ.ಪಿ.ಪ್ರಕಾಶ್ ಕುಟುಂಬಕ್ಕೆ ಬಿ ಫಾರಂ ನೀಡಲಿಲ್ಲ. ಟಿಕೆಟ್ ಕೈ ತಪ್ಪಿದ್ದರಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮತ್ತು ಎಂ.ಪಿ.ವೀಣಾ ಮಹಾಂತೇಶ್ ಇಬ್ಬರು ಪ್ರತ್ಯೇಕ ಉಮೇದುವಾರಿಕೆ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಿದ್ದರು.
ಇದನ್ನೆಲ್ಲಾ ಗಮನಿಸುತ್ತಿದ್ದ ಬೆಂಬಲಿಗರ ಪಡೆ ಸಹೋದರಿಯರ ಕುಟುಂಬದ ಜಗಳದಿಂದಾಗಿ ಎಂ.ಪಿ.ಪ್ರಕಾಶ್ ಕುಟುಂಬಕ್ಕೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡುವಲ್ಲಿ ಹಿಂದೇಟು ಹಾಕಿದೆ ಎಂದು ಚರ್ಚಿಸಲು ಆರಂಭಿಸಿದರು. ಬೆಂಬಲಿಗರ ಸಭೆಗಳಲ್ಲಿ ಒಗ್ಗಟ್ಟಾಗುವಂತೆ ಒತ್ತಾಯಗಳು ಕೇಳಿಬಂದಿದ್ದವು.
ಸಭೆಯಲ್ಲಿ ನಮ್ಮ ಬೆಂಬಲಿಗರು ನೀಡಿದ ಸಲಹೆ ಮೇರೆಗೆ ತವರಿನ ಮೇಲಿನ ಪ್ರೀತಿಯಿಂದ ಮನೆಗೆ ತೆರಳಿ ಅಕ್ಕ ಎಂ.ಪಿ.ಲತಾ ಅವರೊಟ್ಟಿಗೆ ಚರ್ಚಿಸಿ ಎಂ.ಪಿ.ಪ್ರಕಾಶ್ ಕುಟುಂಬ ಒಟ್ಟಾಗಿರಲು ನನ್ನ ಅಭಿಪ್ರಾಯ ತಿಳಿಸಿರುವೆ. ಉಮೇದುವಾರಿಕೆ ಹಿಂಪಡೆಯುವ ಬಗ್ಗೆ ಶೀರ್ಘ ನಿರ್ಧರಿಸುವೆ ಎಂದು ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು
ನಮ್ಮ ಮನೆಗೆ ಸಹೋದರಿ ಎಂ.ಪಿ.ವೀಣಾ ಮತ್ತು ಡಾ.ಮಹಾಂತೇಶ್ ಚರಂತಿಮಠ್ ಅವರ ಆಗಮನದಿಂದ ಸಂತಸವಾಗಿದೆ ಮುಂದಿನ ರಾಜಕಾರಣ ಮತ್ತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಪರಸ್ಪರ ಚರ್ಚೆ ಮಾಡಿದ್ದೇವೆ ಎಂದು ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.