ADVERTISEMENT

ತೆಕ್ಕಲಕೋಟೆ: ‘ನನ್ನ ಜೀವನ-ನನ್ನ ಸ್ವಚ್ಛ ನಗರ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮೇ 2023, 14:03 IST
Last Updated 24 ಮೇ 2023, 14:03 IST
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ ನನ್ನ ಜೀವನ-ನನ್ನ ಸ್ವಚ್ಚನಗರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ ನನ್ನ ಜೀವನ-ನನ್ನ ಸ್ವಚ್ಚನಗರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು   

ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿ ಮುಂಭಾಗದ ವಾಣಿಜ್ಯ ಮಳಿಗೆಯಲ್ಲಿ ಬುಧವಾರ ನಡೆದ ನನ್ನ ಜೀವನ-ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಅನ್ವಯ ‘ಮನೆ ಮನೆಗೆ ಪಂಚಾಯಿತಿ’ ಜಾಥಾಕ್ಕೆ ಚಾಲನೆ ನೀಡಲಾಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ ಮಾತನಾಡಿ, ಪಟ್ಟಣ ಪಂಚಾಯಿತಿ ಮುಂಭಾಗದ ವಾಣಿಜ್ಯ ಮಳಿಗೆಯಲ್ಲಿ ಆರ್‌ಆರ್‌ಆರ್ (ರೆಡ್ಯೂಸ್, ರೆಸ್ಕ್ಯೂ, ರೀ ಸೈಕಲ್) ಕೇಂದ್ರಗಳನ್ನು ಆರಂಭಿಸಲಾಗಿದೆ. ಇಲ್ಲಿ ಆಟಿಕೆ ಸಾಮಾಗ್ರಿಗಳು, ಬಟ್ಟೆ-ಹಳೆಯ ಜೀನ್ಸ್, ಸಮವಸ್ತ್ರ, ಸೀರೆಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ತಮಗೆ ಬೇಡವಾದ, ಮರುಬಳಕೆಗೆ ಬರುವ, ಇನ್ನೊಬ್ಬರು ಉಪಯೋಗಿಸಬಹುದಾದ ಸಾಮಾನು, ಸಲಕರಣೆ, ವಸ್ತ್ರ, ಪುಸ್ತಕ, ಇತರೆ ವಸ್ತುಗಳನ್ನು ನೀಡಿದಲ್ಲಿ ಇನ್ನೊಬ್ಬರ ಉಪಯೋಗಕ್ಕೆ ಬರುವುದಲ್ಲದೆ, ಮರು ಉತ್ಪಾದನೆ ಮುಂದೂಡಲು ಸಾಧ್ಯ. ಇದರಿಂದ ಪರಿಸರ ಮಾಲಿನ್ಯ ತಡೆಯುವುದಲ್ಲದೆ, ಮನೆಯಲ್ಲಿ ಸ್ವಚ್ಛತೆ ಕಾಪಾಡಬಹುದು ಎಂದು ತಿಳಿಸಿದರು.

ಮೇ 20 ರಿಂದ ಜೂ.5ರವರೆಗೆ ಈ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಗುರುವಾರದಿಂದ ಸಾರ್ವಜನಿಕರ ಮನೆಗಳಿಗೆ ತೆರಳಿ ಮರುಬಳಕೆ, ಮರು ಉತ್ಪತ್ತಿ ಹಾಗೂ ತ್ಯಾಜ್ಯ ವಸ್ತುಗಳ ಸಂಗ್ರಹ ಕಾರ್ಯ ನಡೆಯಲಿದ್ದು ನಾಗರಿಕರು ಸಹಕರಿಸುವಂತೆ ಮನವಿ ಮಾಡಿದರು.

ADVERTISEMENT

ಪಟ್ಟಣ ಪಂಚಾಯಿತಿ ಎಂಜಿನಿಯರ್ ಸುನಂದ, ಆರೋಗ್ಯ ನಿರೀಕ್ಷಕಿ ಅನ್ನಪೂರ್ಣ, ಸಿಬ್ಬಂದಿ ಶೋಭಾ, ಹಸೇನ್ ಭಾಷ, ಸಫಾಯಿ ಕರ್ಮಚಾರಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.