ಹೂವಿನಹಡಗಲಿ:ನಾಡಿನ ಸುಪ್ರಸಿದ್ಧಮೈಲಾರಲಿಂಗ ಸ್ವಾಮಿಯ ಕಾರಣಿಕ ಮಹೋತ್ಸವ ಶುಕ್ರವಾರ ನಡೆಯಿತು.ಗೊರವಪ್ಪ ರಾಮಣ್ಣ 'ಕಬ್ಬಿಣದ ಸರಪಳಿ ಹರಿತಲೇ ಪರಾಕ್' ಎಂದು ಕಾರಣಿಕ (ಭವಿಷ್ಯ)ನುಡಿದರು.
ಹೀಗೆ ನುಡಿದ ಕಾರಣಿಕವನ್ನು‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಬಹುದು, ಕಾಂಗ್ರೆಸ್–ಜೆಡಿಎಸ್ ನಡುವಿನ ವೈಷಮ್ಯ ಶಮನಗೊಂಡು ಸರ್ಕಾರ ಸುಭದ್ರವಾಗಬಹುದು,ಭಾರತ- ಪಾಕಿಸ್ತಾನ ಗಡಿ ಸಮಸ್ಯೆ ಇತ್ಯರ್ಥವಾಗಬಹುದು, ರಾಜ್ಯಬರದ ಸಂಕಷ್ಟದಿಂದ ಹೊರಬರಬಹುದು, ರೈತರುಕಷ್ಟದ ಸಂಕೋಲೆಯಿಂದ ಬಿಡಿಸಿಕೊಳ್ಳಬಹುದು’ ಎಂದು ಮಹೋತ್ಸವಕ್ಕೆಜನರುವ್ಯಾಖ್ಯಾನಿಸಿದ್ದು ಕಂಡುಬಂದಿತು.
ಈ ಕಾರಣಿಕವನ್ನು ಆಲಿಸಲುಡೆಂಕನಮರಡಿಗೆ ಬಂದಿದ್ದ ಜನಸ್ತೋಮಮಧ್ಯಾಹ್ನದಿಂದಸುಡುವ ಬಿಸಿಲಿನಲ್ಲಿಕಾದು ಕುಳಿತಿದ್ದರು.ಏಳು ಕೋಟಿ ಚಾಂಗ ಮಲೇ ಜಯಘೋಷ ಕೇಳಿಬಂದಿತು.ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ಉಕ್ತಿಯ ನುಡಿಗೆ ನಾಡಿನ ‘ಭವಿಷ್ಯ ವಾಣಿ’ ಎಂಬ ಪ್ರತೀತಿ ಇದ್ದು, ಉತ್ತರ ಕರ್ನಾಟಕದಲ್ಲಿಯೇ ಬಹುದೊಡ್ಡದಾದ ಈ ಜಾತ್ರೆ ಇದಾಗಿದೆ.
ಹಿಂದಿನ ವರ್ಷ ಧ್ವನಿ ವರ್ಧಕ ವ್ಯವಸ್ಥೆ ಇರದ ಕಾರಣ ಜನ ಕಾರಣಿಕ ನುಡಿ ಸ್ಪಷ್ಟವಾಗಿ ಕೇಳಲು ಸಾಧ್ಯವಾಗಿರಲಿಲ್ಲ. ಬಳಿಕ ಆಡಿಯೊ ಪರೀಕ್ಷೆ ಮಾಡಿಸಿ, ಐದು ದಿನಗಳ ನಂತರ ಕಾರಣಿಕ ನುಡಿ ಏನೆಂಬುದನ್ನು ಅಧಿಕೃತವಾಗಿ ಘೋಷಿಸಲಾಗಿತ್ತು.
ಈ ಬಾರಿ ಅಂತಹಗೊಂದಲಕ್ಕೆ ಆಸ್ಪದ ನೀಡಬಾರದೆಂದು ಜಿಲ್ಲಾಡಳಿತಕಾರಣಿಕ ನುಡಿಯುವ ಸ್ಥಳದಲ್ಲಿ ಧ್ವನಿ ವರ್ಧಕ ವ್ಯವಸ್ಥೆ ಮಾಡಿತ್ತು.ನಂತರ ರೆಕಾರ್ಡ್ ಮಾಡಿದ ಆಡಿಯೊವನ್ನು ಪದೇ ಪದೇ ಬಿತ್ತರಿಸಲಾಗಿತು. ಇದರಿಂದಜನ ಕಾರಣಿಕ ನುಡಿಯನ್ನು ಸ್ಪಷ್ಟವಾಗಿ ಆಲಿಸಲು ಸಾಧ್ಯವಾಯಿತು.
ಕೌತುಕದ ಕ್ಷಣ: ಕಾರಣಿಕ ಮಹೋತ್ಸವ ನಡೆಯುವ ಡೆಂಕನ ಮರಡಿ ಸ್ಥಳವನ್ನುಲಕ್ಷಾಂತರ ಭಕ್ತಾಧಿಗಳು ಸುತ್ತುವರಿದು, ಭವಿಷ್ಯವಾಣಿ ಆಲಿಸಲು ಕಾತುರರಿರುತ್ತಾರೆ. ಕಾರಣಿಕ ನುಡಿಯುವ ಗೊರವಪ್ಪ ಸರಸರನೆ 15 ಅಡಿಗಳಎತ್ತರದ ಬಿಲ್ಲನೇರಿ ಸದ್ದಲೇ ... ಎಂದು ಉದ್ಗರಿಸಿದಾಗ ಕೆಲಕ್ಷಣ ಉಂಟಾಗುವ ನಿಶ್ಯಬ್ದ ವಾತಾವರಣ ಕೌತುಕ ಮೂಡಿಸುತ್ತದೆ. ನಂತರ ನೀಲಾಕಾಶದ ಶೂನ್ಯ ದಿಟ್ಟಿಸಿ ನೋಡಿ ಸ್ವಾಮಿನುಡಿಯುತ್ತಾರೆ.
ಇದನ್ನೂ ಓದಿ:ನಾಡಿನಲ್ಲೇ ವಿಶಿಷ್ಟ ‘ಮೈಲಾರಲಿಂಗ ಪರಂಪರೆ’
ಪೌರಾಣಿಕ ಹಿನ್ನೆಲೆ: ಋಷಿ ಮುನಿಗಳ ತಪೋಭಂಗದೊಂದಿಗೆ ಭೂಲೋಕದ ನೆಮ್ಮದಿ ಕೆಡಿಸಿದ್ದ ಮಣಿಕಾಸುರ, ಮಲ್ಲಾಸುರರೆಂಬ ಬಲಾಢ್ಯ ರಕ್ಕಸರನ್ನು ಸಂಹರಿಸಲು ಶಿವನು ಮೈಲಾರಲಿಂಗನ ಅವತಾರವೆತ್ತಿ ಧರಗೆ ಇಳಿದಿದ್ದನೆಂಬ ಪ್ರತೀತಿ ಇದೆ. ಡೆಂಕನ ಮರಡಿಯಲ್ಲಿ ರಕ್ಕಸರ ಮರ್ದನದ ವಿಜಯೋತ್ಸವದ ಕುರುಹಾಗಿ ಕಾರಣಿಕೋತ್ಸವ ಸಾಗಿ ಬಂದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.