ADVERTISEMENT

ಬಳ್ಳಾರಿ |ನಿರಂತರ ಮಳೆ: ನವಶಿಲಾಯುಗದ ಅವಶೇಷ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 20:30 IST
Last Updated 4 ಅಕ್ಟೋಬರ್ 2024, 20:30 IST
ತೆಕ್ಕಲಕೋಟೆಯ ಉಡೇಗೊಳ ರಸ್ತೆಯಲ್ಲಿರುವ ಪ್ರಾಗೈತಿಹಾಸಿಕ ನೆಲೆಯಾದ ಜಕ್ಕೇರ ಗುಡ್ಡದ ಬೂದಿದಿಬ್ಬದ ಬಳಿ ಸಿಕ್ಕ ಪ್ರಾಚೀನ ಕುರುಹುಗಳು
ತೆಕ್ಕಲಕೋಟೆಯ ಉಡೇಗೊಳ ರಸ್ತೆಯಲ್ಲಿರುವ ಪ್ರಾಗೈತಿಹಾಸಿಕ ನೆಲೆಯಾದ ಜಕ್ಕೇರ ಗುಡ್ಡದ ಬೂದಿದಿಬ್ಬದ ಬಳಿ ಸಿಕ್ಕ ಪ್ರಾಚೀನ ಕುರುಹುಗಳು   

ತೆಕ್ಕಲಕೋಟೆ (ಬಳ್ಳಾರಿ): ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಬೂದಿದಿಬ್ಬದ ಸುತ್ತಮುತ್ತಲ ಪ್ರದೇಶದಲ್ಲಿ ನವಶಿಲಾಯುಗದ ಅವಶೇಷಗಳು ಕಾಣಸಿಗುತ್ತಿವೆ.

‘ಒಂದು ಅಡಿ ಉದ್ದ ಮೂಳೆಗಳು ಸಿಕ್ಕ ವಿಷಯವನ್ನು ರೈತರು ತಿಳಿಸಿದರು. ಅವುಗಳನ್ನು ಅವಲೋಕಿಸಿದರೆ ಪುರಾತನ ಕಾಲದ ಬೃಹತ್ ಗಾತ್ರದ ಪ್ರಾಣಿಯ ಅವಶೇಷದಂತೆ ಕಾಣುತ್ತದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ನದಾಫ್ ತಿಳಿಸಿದರು.

ವಿವಿಧ ಗಾತ್ರದ ಅರೆಯುವ ಕಲ್ಲುಗುಂಡು, ಪ್ರಾಣಿಗಳ ಬೇಟೆಗೆ ಬಳಸುವ ಗುಂಡು, ಕೊಡಲಿಯಾಕಾರದ ಆಯುಧ, ಪ್ರಾಣಿಗಳ ಚರ್ಮ ಸುಲಿಯಲು ಬಳಸುವ ಆಯುಧ, ನೀರು ಸಂಗ್ರಹಿಸುವ ಹೂಜಿಯ ತುಂಡು ಹಾಗೂ ಮಣ್ಣಿನ ಪಾತ್ರೆಗಳ ಚೂರುಗಳೂ ಇವೆ. 

ADVERTISEMENT

‘ಇಲ್ಲಿ ಸಿಕ್ಕ ಮೂಳೆಗಳ ಮೇಲೆ ಗಾರೆಯಂತಹ ರಚನೆಗಳಿವೆ. ಬೂದಿದಿಬ್ಬವು ಅಪರೂಪದ, ಮಹತ್ವದ ಸ್ಥಳ. ಪ್ರಾಗೈತಿಹಾಸಿಕ ಕುರುಹು. ಇದರ ರಕ್ಷಣೆಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ಇತಿಹಾಸ ಸಂಶೋಧನಾರ್ಥಿ, ಉಪನ್ಯಾಸಕ ಮನೋಹರ ಸಿ.ಎಂ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.