ADVERTISEMENT

ಕಂಪ್ಲಿ | ರೌಡಿಶೀಟರ್‌ಗಳ ‍ಪರೇಡ್‌; ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 16:28 IST
Last Updated 12 ಮಾರ್ಚ್ 2024, 16:28 IST
ಲೋಕಸಭಾ ಚುನಾವಣಾ ಅಂಗವಾಗಿ ಕಂಪ್ಲಿಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಾಶ್ ಮಾಳಿ ಅವರು ರೌಡಿ ಶೀಟರ್ಸ್‍ಗಳ ಪ್ಯಾರೇಡ್ ನಡೆಸಿದರು
ಲೋಕಸಭಾ ಚುನಾವಣಾ ಅಂಗವಾಗಿ ಕಂಪ್ಲಿಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಾಶ್ ಮಾಳಿ ಅವರು ರೌಡಿ ಶೀಟರ್ಸ್‍ಗಳ ಪ್ಯಾರೇಡ್ ನಡೆಸಿದರು   

ಕಂಪ್ಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ರೌಡಿಶೀಟರ್‌ಗಳ ಪರೇಡ್ ನಡೆಸಲಾಯಿತು.

ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್ ಮಾಳಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಗೆಳಲ್ಲಿ ತೊಡಗಿಕೊಳ್ಳುವುದು, ಮತದಾರರಿಗೆ ಬೆದರಿಕೆ ಹಾಕುವುದು, ಆಮಿಷ ಒಡ್ಡುವುದು, ತೊಂದರೆ ಕೊಡುವುದು, ಪ್ರಭಾವ ಬೀರುವುದು ಕಾನೂನು ರೀತಿ ಅಪರಾಧವಾಗಿದೆ. ಪಾರದರ್ಶಕ, ಶಾಂತ ಮತ್ತು ಸುವ್ಯವಸ್ಥಿತ ಚುನಾವಣೆಗೆ ಭಂಗವನ್ನುಂಟು ಮಾಡಿದರೆ ಗಡಿಪಾರು ಮಾಡಲಾಗುವುದು’ ಎಂದು ರೌಡಿಶೀಟರ್‌ಗಳಿಗೆ ಎಚ್ಚರಿಗೆ ನೀಡಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‍ಐ ಶೇಷಾಚಲಂ ನಾಯ್ಡು, ಅಪರಾಧ ವಿಭಾಗದ ಪಿಎಸ್‍ಐ ಧರ್ಮಣ್ಣ, ಅಪರಾಧ ವಿಭಾಗದ ಸಿಬ್ಬಂದಿ ವಿಜಯಕುಮಾರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.