ADVERTISEMENT

ಪ್ಯಾಟೆ ಬಸವೇಶ್ವರ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:22 IST
Last Updated 13 ಏಪ್ರಿಲ್ 2024, 14:22 IST
ಕಂಪ್ಲಿ ತಾಲ್ಲೂಕು ಎಮ್ಮಿಗನೂರು ಗ್ರಾಮದ ಪ್ಯಾಟೆ ಬಸವೇಶ್ವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು
ಕಂಪ್ಲಿ ತಾಲ್ಲೂಕು ಎಮ್ಮಿಗನೂರು ಗ್ರಾಮದ ಪ್ಯಾಟೆ ಬಸವೇಶ್ವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು   

ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಪ್ಯಾಟೆ ಬಸವೇಶ್ವರ ರಥೋತ್ಸವವು ಭಕ್ತರ ಜಯಘೋಷದೊಂದಿಗೆ ಶನಿವಾರ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಹಂಪಿ ಸಾವಿರದೇವರ ಮಹಂತಿನ ಮಠದ ವಾಮದೇವ ಮಹಾಂತ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ತೇರಿನಮನೆ ಅವರಣದಿಂದ ಆರಂಭಗೊಂಡ ರಥೋತ್ಸವ, ಎದುರು ಬಸವಣ್ಣವರೆಗೆ ಸಾಗಿ ಬಳಿಕ ಸ್ವಸ್ಥಾನಕ್ಕೆ ಮರಳಿತು. ನೆರೆದಿದ್ದ ಭಕ್ತರು ರಥಕ್ಕೆ ಹಣ್ಣು, ಹೂವು ತೂರಿ ಭಕ್ತಿ ಸಮರ್ಪಿಸಿದರು. ಕಂಪ್ಲಿ, ಮಣ್ಣೂರು, ಸೋಮಲಾಪುರ, ಚಿಟಿಗಿನಹಾಳು, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ನೆಲ್ಲೂಡಿ, ಶಾಂತಿನಗರ, ಹಾವಿನಹಾಳು, ಎಳುಬೆಂಚೆ, ಮಹೆಬೂಬನಗರ, ಮದ್ದಾಪುರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಜಾತ್ರೆ ಅಂಗವಾಗಿ ಐದು ದಿನ ಪ್ಯಾಟೆ ಬಸವೇಶ್ವರ ಮೂರ್ತಿಗೆ ವಿಶೇಷ ಪಂಚಾಭಿಷೇಕ, ಪಲ್ಲಕ್ಕಿ ಉತ್ಸವ, ಪ್ರಭಾವಳಿ ಉಚ್ಛಾಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ನೆರವೇರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.