ADVERTISEMENT

ಸಂಡೂರು ಉಪಚುನಾವಣೆ: ಪ್ರಚಾರದಲ್ಲಿ ರೆಡ್ಡಿಗೆ ಜನರ ತರಾಟೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 19:07 IST
Last Updated 30 ಅಕ್ಟೋಬರ್ 2024, 19:07 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಕುಡುತಿನಿ ಪಟ್ಟಣದಲ್ಲಿ ಬುಧವಾರ ಸಂಜೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರ ಪ್ರಚಾರ ನಡೆಸುತ್ತಿದ್ದ ಜನಾರ್ದನ ರೆಡ್ಡಿ ಅವರನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು.

‘ನಿಮ್ಮ ಅವಧಿಯಲ್ಲಿ ಕೈಗಾರಿಕೆ ಉದ್ದೇಶಕ್ಕೆ ನಮ್ಮ ಭೂಮಿ ವಶಕ್ಕೆ ಪಡೆಯಲಾಯಿತು. ಆದರೆ, ನಮಗೆ ಪರಿಹಾರ ಮತ್ತು  ಉದ್ಯೋಗವೂ ಇಲ್ಲ’ ಎಂಬಂತಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ ‘ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ. ನಿಮ್ಮ ಮನೆಯಲ್ಲಿ ನನ್ನ ಫೋಟೊ ಇಟ್ಟು ಪೂಜಿಸುವಂತೆ ಮಾಡುತ್ತೇನೆ’ ಎಂದರು. 

ADVERTISEMENT

ಜನಾರ್ದನ ರೆಡ್ಡಿ ಮಾತಿಗೆ ಸಮಾಧಾನಗೊಳ್ಳದ ಗ್ರಾಮಸ್ಥರು ತಮ್ಮ ನೋವು ಹೇಳಿಕೊಳ್ಳಲಾರಂಭಿಸಿದರು. ಆಗ ಜನಾರ್ದನ ರೆಡ್ಡಿ, ಪೊಲೀಸರನ್ನು ಉದ್ದೇಶಿಸಿ ‘ಕುಡಿದಿರುವವರನ್ನು ಹೊರಗೆ ಕರೆದುಕೊಂಡು ಹೋಗಿ‘ ಎಂದರು. ಆಗ ಜನ ಮತ್ತಷ್ಟು ಆಕ್ರೋಶಗೊಂಡರು. ಮತ್ತೆ ಪೊಲೀಸರ ಮೇಲೆ ರೇಗಾಡಿದ ರೆಡ್ಡಿ, ‘ನೀವು ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿದ್ದೀರಿ’ ಎಂದರು. ಅಲ್ಲಿಂದ ನಿರ್ಗಮಿಸಿದ ರೆಡ್ಡಿ, ಸ್ಥಳೀಯ ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.