ADVERTISEMENT

ಬಳ್ಳಾರಿ | ವಿದ್ಯುತ್ ದರ ಏರಿಕೆ ಅವೈಜ್ಞಾನಿಕ: ಕರ್ನಾಟಕ ರಕ್ಷಣಾ ವೇದಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 15:31 IST
Last Updated 27 ಜೂನ್ 2023, 15:31 IST
ವಿದ್ಯುತ್ ದರ ಏರಿಕೆಯ ಆದೇಶವನ್ನು ಸರ್ಕಾರವು ತ್ವರಿತವಾಗಿ ಹಿಂಪಡೆಯುವಂತೆ ಒತ್ತಾಯಿಸಿ ಕುಡುತಿನಿಯ ಕರವೇ ಮುಖಂಡರು ಮಂಗಳವಾರ ಜೆಸ್ಕಾಂ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು
ವಿದ್ಯುತ್ ದರ ಏರಿಕೆಯ ಆದೇಶವನ್ನು ಸರ್ಕಾರವು ತ್ವರಿತವಾಗಿ ಹಿಂಪಡೆಯುವಂತೆ ಒತ್ತಾಯಿಸಿ ಕುಡುತಿನಿಯ ಕರವೇ ಮುಖಂಡರು ಮಂಗಳವಾರ ಜೆಸ್ಕಾಂ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು    

ಕುಡುತಿನಿ (ತೋರಣಗಲ್ಲು): ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆಯು ಅವೈಜ್ಞಾನಿಕವಾಗಿದ್ದು, ಎಲ್ಲ ವರ್ಗದ ಜನರ ಅನುಕೂಲಕ್ಕಾಗಿ ಬೆಲೆ ಏರಿಕೆಯ ಆದೇಶವನ್ನು ಸರ್ಕಾರವು ತ್ವರಿತವಾಗಿ ಹಿಂಪಡೆಯುವಂತೆ ಕುಡುತಿನಿಯ ಕರವೇ ಮುಖಂಡರು ಒತ್ತಾಯಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಕಾವಲು ಪಡೆಯ ಮುಖಂಡರು ಜೆಸ್ಕಾಂ ಕಚೇರಿಯ ಆವರಣದಲ್ಲಿ ಮಂಗಳವಾರ ಕೆಲಕಾಲ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಕಚೇರಿ ಸಿಬ್ಬಂದಿ ಆನಂದ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಕಾವಲು ಪಡೆಯ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ‘ರಾಜ್ಯ ಸರ್ಕಾರವು ವಿದ್ಯುತ್ ಬೆಲೆಯನ್ನು ಏಕಾಏಕಿಯಾಗಿ ಹೆಚ್ಚಿಸಿದ್ದರಿಂದ ಸಾಮಾನ್ಯ ಜನರು, ವಿವಿಧ ಕ್ಷೇತ್ರಗಳ ವರ್ತಕರು ಹೆಚ್ಚುವರಿ ವಿದ್ಯತ್ ಬೆಲೆಯಿಂದ ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲ ವರ್ಗದ ಜನರ ಆರ್ಥಿಕ ಸುಗಮ ಜೀವನಕ್ಕಾಗಿ ರಾಜ್ಯ ಸರ್ಕಾರವು ತ್ವರಿತವಾಗಿ ಈ ಅವೈಜ್ಞಾನಿಕ ವಿದ್ಯುತ್ ಬೆಲೆಯ ಆದೇಶವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ಬಾವಿ ಶಿವಕುಮಾರ್, ಎ.ರಾಜಾ, ದೇವೇಂದ್ರಪ್ಪ, ರಮೇಶ್, ತಾಯಪ್ಪ, ಶಂಕರ, ಮಾಲಿಂಗ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.