ADVERTISEMENT

ಕೊಟ್ಟೂರು ಮಳೆಗೆ 4 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:38 IST
Last Updated 22 ಅಕ್ಟೋಬರ್ 2024, 15:38 IST
ಕೊಟ್ಟೂರು ತಾಲ್ಲೂಕಿನ ಅಲಬೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಬಿ.ಗೌರಮ್ಮ ಅವರ ಮನೆ ಕುಸಿದಿರುವುದು
ಕೊಟ್ಟೂರು ತಾಲ್ಲೂಕಿನ ಅಲಬೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಬಿ.ಗೌರಮ್ಮ ಅವರ ಮನೆ ಕುಸಿದಿರುವುದು   

ಕೊಟ್ಟೂರು: ತಾಲ್ಲೂಕಿನಾದ್ಯಂತ ಸೋಮವಾರ ಸುರಿದ ನಿರಂತರ ಮಳೆಗೆ 4 ಮನೆಗಳು ಹಾನಿಯಾಗಿದ್ದು ಹೊಲಗಳಲ್ಲಿ ಬೆಳೆಗಳು ಜಲಾವೃತಗೊಂಡಿವೆ.

ಕೊಟ್ಟೂರಿನಲ್ಲಿ 2.36 ಸೆಂ.ಮೀ ಹಾಗೂ ಕೋಗಳಿಯಲ್ಲಿ 1.32 ಸೆಂ.ಮೀ ಮಳೆಯಾಗಿದ್ದು, 4 ಮನೆಗಳಿಗೆ ಹಾನಿಯುಂಟಾಗಿದೆ. ಅಲಬೂರು ಗ್ರಾಮದಲ್ಲಿ ಸುಗಂಧಮ್ಮ, ಬಿ.ಗೌರಮ್ಮ ಹಾಗೂ ಎಚ್.ಎಂ. ಜಯಮ್ಮ ಹಾಗೂ ಪಟ್ಟಣದಲ್ಲಿ ಒಂದು ಮನೆ ಭಾಗಶಃ ಹಾನಿಯಾಗಿವೆ.

ಅಲಬೂರ ಗ್ರಾಮದ ಸಮೀಪದಲ್ಲಿ ಹಾದು ಹೋಗಿರುವ ಹಗರಿ ಹಳ್ಳವು ತುಂಬಿ ಹರಿಯುತ್ತಿರುವುದರಿಂದ ಸೇತುವೆ ಮೇಲೆ ಜನತೆ ಸಂಚರಿಸದಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ನೀಡಿದೆ.

ADVERTISEMENT

ಬೆಳೆ ಹಾನಿ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಜಮೀನುಗಳಿಗೆ ಸ್ಥಳ ಪರಿಶೀಲನೆ ಮಾಡಿ ನಿಖರ ವರದಿಯನ್ನು ನೀಡುವಂತೆ ಆದೇಶಿಸಿದ್ದು ಗ್ರಾಮ ಲೆಕ್ಕಿಗರು ಕೇಂದ್ರಸ್ಧಾನದಲ್ಲಿದ್ದು, ಹಾನಿಯ ಮಾಹಿತಿಯನ್ನು ಕೂಡಲೇ ತಿಳಿಸಬೇಕೆಂದು ಹಾಗೂ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಗುರುತಿಸಿ ಅಲ್ಲಿ ವಾಸಿಸುವಂತವರನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ತಹಶೀಲ್ದಾರ್ ಜಿ.ಕೆ.ಅಮರೀಶ್ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.