ADVERTISEMENT

ಉತ್ತಮ ಮಳೆ: ಕೋಡಿ ಬಿದ್ದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:38 IST
Last Updated 22 ಅಕ್ಟೋಬರ್ 2024, 15:38 IST
ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಹಳ್ಳದ ಬಳಿಯಿರುವ ಕಣಿವೆಪ್ಪ ಅವರ ಮನೆಗೆ ಹಳ್ಳದ ನೀರು ನುಗ್ಗಿದೆ
ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಹಳ್ಳದ ಬಳಿಯಿರುವ ಕಣಿವೆಪ್ಪ ಅವರ ಮನೆಗೆ ಹಳ್ಳದ ನೀರು ನುಗ್ಗಿದೆ   

ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಎರಡು ಮನೆಗಳಿಗೆ ಹಾನಿಯಾಗಿದೆ.

ಅಲ್ಲದೆ ಜಿ.ನಾಗಲಾಪುರ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಹಳ್ಳದ ಬಳಿಯಿರುವ ಕಣಿವೆಪ್ಪ ಎನ್ನುವರ ಮನಗೆ ಹಳ್ಳದ ನೀರು ನುಗ್ಗಿದ್ದು, ಮನೆಯಲ್ಲಿದ್ದ ದವಸಧಾನ್ಯಗಳು, ಬಟ್ಟೆಬರೆಗಳು ನೀರುಪಾಲಾಗಿವೆ.

ಇನ್ನು ಹೋಬಳಿ ವ್ಯಾಪ್ತಿಯಲ್ಲಿ ರಾತ್ರಿ ಸುರಿದ ಮಳಗೆ ಒಟ್ಟು 3 ಎಕರೆ ರಾಗಿ, 2 ಎಕರೆ ಭತ್ತ ಹಾಗೂ 5 ಎಕರೆ ಸಜ್ಜೆ ನೆಲಕ್ಕೊರಗಿದೆ ಎಂದು ಕೃಷಿ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯ ಅತಿದೊಡ್ಡ ಕೆರೆ ಡಣಾಯಕನಕೆರೆ ಎರಡು ವರ್ಷದ ಬಳಿಕ ಬಹುತೇಕ ತುಂಬಿದ್ದು, ಜಿ.ನಾಗಲಾಪುರ ಹಾಗೂ ಪೋತಲಕಟ್ಟೆ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಇನ್ನು ಪಟ್ಟಣದಲ್ಲಿ 2.5 ಸೆಂ.ಮೀ ಮಳೆ ವರದಿಯಾಗಿದೆ.

ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸುರಿಯು ನಿರಂತರ ಮಳೆಗೆ ಸಮೀಪದ ಜಿ.ನಾಗಲಾಪುರ ಗ್ರಾಮದ ಕೆರೆ ಸೋಮವಾರ ತುಂಬಿ ಕೋಡಿ ಹರಿಯಿತು.
ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸುರಿಯು ನಿರಂತರ ಮಳೆಗೆ ಸಮೀಪದ ಪೋತಲಕಟ್ಟೆ ಗ್ರಾಮದ ಕೆರೆ ಸೋಮವಾರ ತುಂಬಿ ಕೋಡಿ ಹರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.