ADVERTISEMENT

ಕಡಿಮೆ ಪರಿಹಾರ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:37 IST
Last Updated 22 ಅಕ್ಟೋಬರ್ 2024, 15:37 IST
ವಿಠಲಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿ ಮಳೆಗೆ ಕುಸಿದು ಬಿದ್ದ ಮನೆಗೆ ಅಧಿಕಾರಿಗಳು ಕಡಿಮೆ ಪರಿಹಾರ ನೀಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು
ವಿಠಲಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿ ಮಳೆಗೆ ಕುಸಿದು ಬಿದ್ದ ಮನೆಗೆ ಅಧಿಕಾರಿಗಳು ಕಡಿಮೆ ಪರಿಹಾರ ನೀಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು   

ತೋರಣಗಲ್ಲು: ಹೋಬಳಿಯ ವಿಠಲಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿಯ ನಿವಾಸಿ ಸಣ್ಣಬಾಬು ಅವರ ಮನೆಯು ನಿರಂತರ ಮಳೆಗೆ ಹಂತ ಹಂತವಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಸರ್ಕಾರವು ಕಡಿಮೆ ಪರಿಹಾರ ನೀಡಿರುವುದನ್ನು ವಿರೋಧಿಸಿ ಕುಟುಂಬಸ್ಥರು ಸೋಮವಾರ ಕುಸಿದ ಮನೆಯಲ್ಲೆ ಪ್ರತಿಭಟನೆ ನಡೆಸಿದರು.

‘ನಿರಂತರ ಮಳೆಯಿಂದ ಕುಸಿದ ಮನೆಗೆ ಸರ್ಕಾರ ಮೊದಲ ಕಂತಿನಲ್ಲಿ ₹4,000, ಎರಡನೇ ಕಂತಿನಲ್ಲಿ ₹2,500 ಒಟ್ಟು ₹6,500 ಪರಿಹಾರ ಸಿಕ್ಕಿದೆ. ನಮ್ಮ ಕಾಲೊನಿಯಲ್ಲಿ ಬಿದ್ದಿರುವ ಬೇರೆಯವರ ಮನೆಗೆ ₹1.20 ಲಕ್ಷ ಪರಿಹಾರ ಒಂದೇ ಕಂತಿನಲ್ಲಿ ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಎಡವಟ್ಟಿ ನಿಂದ ನಮಗೆ ಕಡಿಮೆ ಪರಿಹಾರ ಬಂದಿದೆ. ಅಧಿಕಾರಿಗಳನ್ನು ವಿಚಾರಿಸಿದರೇ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಮನೆಯ ಮಾಲೀಕ ಸಣ್ಣಬಾಬು ದೂರಿದರು.

‘ಗ್ರಾಮದಲ್ಲಿ ನಿರಂತರ ಮಳೆಗೆ ಈ ವರ್ಷ 8 ಮನೆಗಳು ಬಿದ್ದಿದ್ದು ಎಲ್ಲ ಮನೆಗಳ ಮಾಹಿತಿಯನ್ನು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಕಡಿಮೆ ಪರಿಹಾರ ಬಂದಿರುವ ಫಲಾನುಭವಿಗಳು ಸಂಡೂರು ತಾಲ್ಲೂಕಿನ ಕಂದಾಯ ಇಲಾಖೆಯನ್ನು ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ವಿಠಲಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಗಂಗಾಧರ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.