ADVERTISEMENT

ಕಂಪ್ಲಿ: ಮಳೆಗೆ ಮನೆ ಚಾವಣಿ, ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 13:01 IST
Last Updated 13 ಜೂನ್ 2024, 13:01 IST
ಕಂಪ್ಲಿಯ 15ನೇ ವಾರ್ಡ್ ರಾಮಲಿಂಗಮ್ಮ ದೇವಸ್ಥಾನ ಬಳಿಯ ದೇವರಾಜ ಹನುಮಂತಪ್ಪ ಅವರ ವಾಸದ ಮನೆಯ ಚಾವಣಿ ಬುಧವಾರ ಸುರಿದ ಮಳೆಗೆ ಕುಸಿದಿದೆ
ಕಂಪ್ಲಿಯ 15ನೇ ವಾರ್ಡ್ ರಾಮಲಿಂಗಮ್ಮ ದೇವಸ್ಥಾನ ಬಳಿಯ ದೇವರಾಜ ಹನುಮಂತಪ್ಪ ಅವರ ವಾಸದ ಮನೆಯ ಚಾವಣಿ ಬುಧವಾರ ಸುರಿದ ಮಳೆಗೆ ಕುಸಿದಿದೆ   

ಕಂಪ್ಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬುಧವಾರ 4.02ಸೆಂ.ಮೀ ಮಳೆಯಾಗಿದೆ.

ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾಮದ ಪದ್ದಮ್ಮ ಹನುಮಂತಪ್ಪ ಅವರ ವಾಸದ ಮನೆಯ ಗೋಡೆ ಕುಸಿದಿದೆ.

ದೇವಲಾಪುರ ಗ್ರಾಮದ ಗೊರವರ ಈಶ್ವರಪ್ಪ ಮಲ್ಲಪ್ಪ ಮತ್ತು ಕಂಪ್ಲಿಯ 15ನೇ ವಾರ್ಡ್ ರಾಮಲಿಂಗಮ್ಮ ದೇವಸ್ಥಾನ ಬಳಿ ದೇವರಾಜ ಹನುಮಂತಪ್ಪ ಅವರ ವಾಸದ ಮನೆಗಳ ಚಾವಣಿ ಕುಸಿದಿವೆ.

ADVERTISEMENT

ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಹಶೀಲ್ದಾರ್ ಶಿವರಾಜ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.