ADVERTISEMENT

200 ರೌಡಿಶೀಟರ್‌ ಪೆರೇಡ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 13:45 IST
Last Updated 7 ಫೆಬ್ರುವರಿ 2021, 13:45 IST
ಡಿವೈಎಸ್ಪಿ ವಿ. ರಘುಕುಮಾರ ಸಮ್ಮುಖದಲ್ಲಿ ಭಾನುವಾರ ಹೊಸಪೇಟೆಯ ಪಟ್ಟಣ ಠಾಣೆಯಲ್ಲಿ ರೌಡಿಶೀಟರ್‌ಗಳ ಪೆರೇಡ್‌ ನಡೆಯಿತು
ಡಿವೈಎಸ್ಪಿ ವಿ. ರಘುಕುಮಾರ ಸಮ್ಮುಖದಲ್ಲಿ ಭಾನುವಾರ ಹೊಸಪೇಟೆಯ ಪಟ್ಟಣ ಠಾಣೆಯಲ್ಲಿ ರೌಡಿಶೀಟರ್‌ಗಳ ಪೆರೇಡ್‌ ನಡೆಯಿತು   

ಹೊಸಪೇಟೆ: ಇಲ್ಲಿನ ಪಟ್ಟಣ ಠಾಣೆಯಲ್ಲಿ ಭಾನುವಾರ ರೌಡಿಶೀಟರ್‌ಗಳ ಪೆರೇಡ್‌ ನಡೆಯಿತು.

ಮನೆ ಕಳ್ಳತನ, ಸರಗಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ 200ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪೆರೇಡ್‌ನಲ್ಲಿ ಇದ್ದರು. ಡಿವೈಎಸ್ಪಿ ವಿ. ರಘುಕುಮಾರ, ‘ಯಾರು ಕೂಡ ಅಪರಾಧ ಪ್ರಕರಣದಲ್ಲಿ ಭಾಗಿಯಾಗಬಾರದು. ಒಂದುವೇಳೆ ಮತ್ತೆ ದುಷ್ಕೃಕೃತ್ಯ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಈ ಹಿಂದೆ ಎಸಗಿದ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲವರು ಶಿಕ್ಷೆ ಎದುರಿಸಿದ್ದೀರಿ. ಕೆಲವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು. ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸ ಮಾಡಿ ಸಮಾಜದಲ್ಲಿ ಜೀವನ ನಡೆಸಬೇಕು’ ಎಂದು ಹೇಳಿದರು.

ADVERTISEMENT

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸ ಮೇಟಿ, ಶ್ರೀನಿವಾಸ, ಜಯಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.