ಕುರುಗೋಡು: ಒಣ ಮೆಣಸಿನಕಾಯಿ ಖರೀದಿಸಿದ ಮಧ್ಯವರ್ತಿಗಳು ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಮನನೊಂದ ನಾಲ್ವರು ರೈತರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಭಾನುವಾರ ಜರುಗಿದೆ.
ಮೆಣಸಿನಕಾಯಿ ಖರೀದಿಸಿದ್ದ ಮಧ್ಯವರ್ತಿ ರಾಮರೆಡ್ಡಿ ಮನೆಯ ಮುಂದೆಯೇ ಘಟನೆ ನಡೆದಿದೆ. ರೈತರಿಗೆ ರಾಮರೆಡ್ಡಿ ₹1.93ಕೋಟಿ ಬಾಕಿ ಹಣ ಪಾವತಿಸಬೇಕಿತ್ತು ಎನ್ನಲಾಗಿದೆ.
ಸೋಮಸಮುದ್ರ ಗ್ರಾಮದ ಕೆ.ಕೋಣೀರಪ್ಪ (32), ಗುಡಿಸಲು ಹನುಮಂತ (32) ಎಣ್ಣೆ ಶೇಖರಪ್ಪ (43) ಕಂಪ್ಲಿ ತಾಲ್ಲೂಕು ಜವುಕು ಗ್ರಾಮದ ರುದ್ರೇಶ್ (53) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಇವರನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುರುಗೋಡು ಸಿಪಿಐ ವಿಶ್ವನಾಥ ಕೆ.ಹಿರೇಗೌಡರ್ ಮತ್ತು ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಘಟನಾಸ್ಥಳಕ್ಕೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.