ADVERTISEMENT

ಸಂಡೂರು ಉಪಚನಾವಣೆ| ಮತಗಟ್ಟೆಗಳತ್ತ ಹೊರಟ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 10:27 IST
Last Updated 12 ನವೆಂಬರ್ 2024, 10:27 IST
<div class="paragraphs"><p>ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮತಯಂತ್ರ ಹೊತ್ತ ಸಿಬ್ಬಂದಿ ತಮ್ಮ ಬೂತ್‌ಗಳತ್ತ ಹೊರಟರು</p></div>

ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮತಯಂತ್ರ ಹೊತ್ತ ಸಿಬ್ಬಂದಿ ತಮ್ಮ ಬೂತ್‌ಗಳತ್ತ ಹೊರಟರು

   

ಪ್ರಜಾವಾಣಿ ವಾರ್ತೆ

ಸಂಡೂರು (ಬಳ್ಳಾರಿ): ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬುಧವಾರ ಮತದಾನ ನಡೆಯುತ್ತಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮಸ್ಟರಿಂಗ್ ಕಾರ್ಯ ನಡೆಯಿತು. 

ADVERTISEMENT

ಚುನಾವಣೆ ಮತಗಟ್ಟೆಗಳಿಗೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ ತಮಗೆ ನೀಡಲಾದ ಮತಯಂತ್ರಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಇತರೆ ಎಲ್ಲ ಸಲಕರಣೆಗಳನ್ನು ಹೊತ್ತು ಮತಗಟ್ಟೆಗಳತ್ತ ಬಸ್‌ ಹತ್ತಿ ಹೊರಟರು. 

ಮತಗಟ್ಟೆ ಸಿಬ್ಬಂದಿಗೆ ಕಾಲೇಜು ಮೈದಾನದಲ್ಲೇ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು. 

ಚುನಾವಣಾ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಪೇದೆ ಲಕ್ಷ್ಮಣ ಎಂಬುವವರು ಮಂಗಳವಾರ ಅಸ್ವಸ್ಥಗೊಂಡರು. ಅವರನ್ನು ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. 

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್‌ ಮಿಶ್ರಾ, ‘ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಒಟ್ಟು 253 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ 60 ಸೂಕ್ಷ್ಮ ಮತಗಟ್ಟೆಗಳಾಗಿವೆ. 1176 ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ’ ಎಂದರು 

‘ಕ್ಷೇತ್ರದ 127 ಕಡೆ ವೆಬ್‌ಕಾಸ್ಟ್‌ ನಡೆಯಲಿದೆ. ಸೋಮವಾರ ರಾತ್ರಿಯಿಂದಲೇ ಕ್ಷೇತ್ರದಾದ್ಯಂತ ಮದ್ಯ ಮಾರಾಟ ನಿಷೇಧಗೊಂಡಿದೆ’ ಎಂದರು.  

ಚುನಾವಣಾ ಭದ್ರತೆ ಮೂವರು ಡಿವೈಎಸ್‌ಪಿ, 6 ಸಿಪಿಐ, 14 ಪಿಎಸ್‌ಐ, 22 ಎಎಸ್ಐ, 193 ಹೆಡ್ ಕಾನ್‌ಸ್ಟೇಬಲ್‌, 281 ಕಾನ್‌ಸ್ಟೇಬಲ್‌, 160 ಹೋಮ್ ಗಾರ್ಡ್‌, 5 ಡಿಎಆರ್ ತುಕಡಿ, 14 ಕೆಎಸ್‌ಆರ್‌ಪಿ ತುಕಡಿಗಳು ಸೇರಿ ಒಟ್ಟು 1113 ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ ಶೋಭಾರಾಣಿ ವಿ.ಜೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.