ಸಂಡೂರು ಉಪಚುನಾವಣೆ ಮತ ಎಣಿಕೆ ಪೂರ್ಣಗೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 9,645 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರಿಗೆ ಒಟ್ಟು 93,616 ಮತಗಳು ಲಭಿಸಿವೆ. ಎದುರಾಳಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ.
ಸಂಡೂರು ಉಪ ಚುನಾವಣೆಯಲ್ಲಿ ಅಧರ್ಮ ಗೆದ್ದಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಹೇಳಿದರು.
ಸೋಲು ತಿಳಿಯುತ್ತಲೇ ಮತ ಎಣಿಕೆ ಕೇಂದ್ರದಿಂದ ಹೊರನಡೆದ ಅವರು ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು 'ಇದು ಧರ್ಮ ಯುದ್ಧ. ಅಧರ್ಮ ಗೆದ್ದಿದೆ. ಸೋಲಿನ ಹೊಣೆ ನಾನೇ ಹೊರುವೆ' ಎಂದರು.
'ಈ ಕ್ಷೇತ್ರ ಗೆಲ್ಲುವ ಭರವಸೆಯನ್ನು ವರಿಷ್ಠರಿಗೆ ನೀಡಿದ್ದೆ. ಗೆಲ್ಲಲು ಸಾಧ್ಯವಾಗದೇ ಇರುವುದಕ್ಕೆ ಎಲ್ಲರ ಕ್ಷಮೆ ಕೇಳುವೆ. ಪಕ್ಷದ ವರಿಷ್ಠರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವೆ' ಎಂದರು.
'ಮುಸ್ಲಿಂ, ಕುರುಬ ಸಮುದಾಯದ ವೋಟುಗಳು ನಮಗೆ ಬಂದಿಲ್ಲ. ಶಿವರಾಜ ತಂಗಡಗಿ ಉಸ್ತುವಾರಿ ವಹಿಸಿದ್ದ ಭಾಗದಲ್ಲಿ ಹಣದ ಹೊಳೆ ಹರಿದಿದೆ' ಎಂದು ಆರೋಪಿಸಿದರು.
'ಮುಖ್ಯಮಂತ್ರಿ ಮೂರು ದಿನ ಉಳಿದು ಕೆಲಸ ಮಾಡಿದರು. ಹಣ ಖರ್ಚು ಮಾಡಿ ಕಾಂಗ್ರೆಸ್ ಗೆದ್ದಿದೆ. ಗ್ಯಾರೆಂಟಿ ಹಣ ಬಿಡುಗಡೆಯೂ ಚುನಾವಣೆಯಲ್ಲಿ ಕೆಲಸ ಮಾಡಿದೆ' ಎಂದರು.
ಸಂಡೂರಿನಲ್ಲಿ 16 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ 8,881 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ - 83368
ಬಿಜೆಪಿ -74487
15ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ 8,239 ಮತಗಳ ಮುನ್ನಡೆ
ಕಾಂಗ್ರೆಸ್ – 78,277
ಬಿಜೆಪಿ – 70,038
ಮತ ಎಣಿಕೆಯಲ್ಲಿ ಕಾಂಗ್ರೆಸ್ ತನ್ನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.
12ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ನ ಅನ್ನಪೂರ್ಣ ಅವರು ಬಿಜೆಪಿಯ ಬಂಗಾರು ಹನುಮಂತ ವಿರುದ್ಧ 6,562 ಮತಗಳಿಂದ ಮುಂದಿದ್ದಾರೆ.
ಕಾಂಗ್ರೆಸ್ 67,124 ಮತ ಪಡೆದರೆ, ಬಿಜೆಪಿ 60,562 ಮತ ಪಡೆದಿದೆ.
ಸಂಡೂರು ಮತ ಕ್ಷೇತ್ರದ 11 ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 4,497 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ – 56,236 ಮತಗಳು
ಬಿಜೆಪಿ – 51,739 ಮತಗಳು
ಅರ್ಧದಷ್ಟಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಒಟ್ಟು 19 ಸುತ್ತುಗಳ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದರಲ್ಲಿ ಈವರೆಗೆ 10 ಸುತ್ತುಗಳು ಮುಕ್ತಾಯಗೊಂಡಿವೆ.
ಹತ್ತನೇ ಸುತ್ತಿನಲ್ಲಿ ಅನ್ನಪೂರ್ಣ 3,488 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್ 50692 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ 47204 ಮತ ಪಡೆದು ಹಿಂದೆ ಬಿದ್ದಿದ್ದಾರೆ.
ಕಾಂಗ್ರೆಸ್: 44,463
ಬಿಜೆಪಿ: 43,555
ಕಾಂಗ್ರೆಸ್ 1,108 ಮತಗಳ ಮುನ್ನಡೆ
ಕಾಂಗ್ರೆಸ್: 38,373
ಬಿಜೆಪಿ: 38,340
ಕಾಂಗ್ರೆಸ್ 33 ಮತಗಳ ಮುನ್ನಡೆ
ಆರಂಭದ ಮೂರು ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಐದನೇ ಸುತ್ತಿನಲ್ಲಿ ಆಘಾತ ಎದುರಿಸಿದ್ದಾರೆ.
ನಾಲ್ಕನೇ ಸುತ್ತಿನಲ್ಲಿ ಅನ್ನಪೂರ್ಣ 1,001 ಮತಗಳ ಮುನ್ನಡೆ ಪಡೆದಿದ್ದರು. ಆದರೆ, ಐದನೇ ಸುತ್ತಿನಲ್ಲಿ ಅಂತರ 205ಕ್ಕೆ ಕುಸಿದಿದೆ
ಕಾಂಗ್ರೆಸ್ 23,877 ಮತ ಪಡೆದರೆ,
ಬಿಜೆಪಿ 23,672 ಮತ ಗಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ 4ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ, ಮತಗಳ ಅಂತರದಲ್ಲಿ ಈಗ ಮತ್ತಷ್ಟು ಕುಸಿತವಾಗಿದೆ.
ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ 1973 ಮತಗಳ ಮುನ್ನಡೆ ಪಡೆದಿತ್ತು. ನಾಲ್ಕನೇ ಸುತ್ತಿನಲ್ಲಿ 1001 ಮುನ್ನಡೆ ಇದೆ.
ಸದ್ಯ, ಕಾಂಗ್ರೆಸ್ ಅಭ್ಯರ್ಥಿ 20,128 ಮತ ಪಡೆದರೆ, ಬಿಜೆಪಿ 19,127 ಮತ ಗಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಮೂರನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ, ಮತಗಳ ಅಂತರ ಕಡಿಮೆಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ 1,973 ಮತಗಳ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ 15,874 ಮತ ಪಡೆದರೆ, ಬಿಜೆಪಿ 13,901 ಮತ ಗಳಿಸಿದೆ.
ಉಪಚುನಾವಣೆಯ ಮತ ಎಣಿಕೆಯ ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರ ವಿರುದ್ಧ ಅನ್ನಪೂರ್ಣ 2715 ಮತಗಳ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ 11,770 ಮತ ಪಡೆದರೆ, ಬಿಜೆಪಿ 9,055 ಮತ ಗಳಿಸಿದೆ.
ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 2,586 ಮತಗಳ ಮುನ್ನಡೆ.
ಪಡೆದ ಮತಗಳು
ಕಾಂಗ್ರೆಸ್ - 6,959
ಬಿಜೆಪಿ - 4,373
ಮತ ಎಣಿಕೆ ಆರಂಭಕ್ಕೂ ಮುನ್ನ ಸಿಬ್ಬಂದಿಯ ಪ್ರಮಾಣ
ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್ ಅನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚುನಾವಣಾಧಿಕಾರಿ ಸಮ್ಮುಖ ತೆಗೆಯಲಾಯಿತು
ಸಂಡೂರು ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಈ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಹೇಳಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಕಾರ್ಯಕರ್ತರು ಮುಖಂಡರೊಂದಿಗೆ ಬಂದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. 'ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯ ಇದೆ. ಜನ ಬದಲಾವಣೆ ಬಯಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ನನ್ನ ಗೆಲುವು ಖಚಿತ' ಎಂದು ಅವರು ತಿಳಿಸಿದರು.
'ಬಿಜೆಪಿ ನಾಯಕರು ಈ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದೆ. ಸೋಲುವ ಭೀತಿಯಿಂದಲೇ ಸಿಎಂ ಸಿದ್ದರಾಮಯ್ಯ ಮೂರು ದಿನ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡಿದರು. 14 ವರ್ಷಗಳ ಬಳಿಕ ಜನಾರ್ದನ ರೆಡ್ಡಿ ಜಿಲ್ಲೆಗೆ ಬಂದಿರುವುದು ನಮಗೆ ಪೂರಕವಾಗಲಿದೆ' ಎಂದರು.
ಸಂಡೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ.
ಮತ ಎಣಿಕೆ ಕೇಂದ್ರಕ್ಕೆ ಬರುತ್ತಿರುವ ಸಿಬ್ಬಂದಿಯನ್ನು ಪೊಲೀಸರು ಕಾಲೇಜಿನ ಮುಖ್ಯ ದ್ವಾರದ ಬಳಿಯೇ ಪರಿಶೀಲಿಸಿ ಒಳಗೆ ಬಿಡುತ್ತಿದ್ದಾರೆ.
ನಗರ ಡಿಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.
ಬೆಳಗ್ಗೆ 7ಕ್ಕೆ ಸರಿಯಾಗಿ ಸ್ಟ್ರಾಂಗ್ ರೂಮ್ ಅನ್ನು ತೆರೆಯಲಿರುವ ಅಧಿಕಾರಿಗಳು, ಪರಿಶೀಲನೆ ಬಳಿಕ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಕಾರ್ಯ ಪ್ರಾರಂಭಿಸಿಲಿದ್ದಾರೆ.
ಒಟ್ಟು 19 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕ್ಷೇತ್ರದ ಚುನಾವಣಾ ಅಧಿಕಾರಿಯು ಆದ ವಿಭಾಗೀಯ ಅಧಿಕಾರಿ ರಾಜೇಶ್ ಎಚ್. ಡಿ ತಿಳಿಸಿದ್ದಾರೆ.
ಬಹುತೇಕ ಮಧ್ಯಾಹ್ನದ ಹೊತ್ತಿಗೆ ಸಂಡೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.
ಕ್ಷೇತ್ರದಲ್ಲಿ ಒಟ್ಟು 2,36,402 ಮತದಾರರಿದ್ದಾರೆ. ಈ ಪೈಕಿ 1,80,189 ಮತದಾನ ಮಾಡಿದ್ದಾರೆ. ಇದರಲ್ಲಿ 90,922 ಮಂದಿ ಪುರುಷ ಮತ್ತು 89,252 ಮಂದಿ ಮಹಿಳಾ ಮತದಾರರು, 12 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಈ ಪೈಕಿ ಶೇ 76.24 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇದೇ ಕ್ಷೇತ್ರದಲ್ಲಿ, 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳೆ ಶೇ 77.07ರಷ್ಟು ಮತದಾನವಾಗಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಶೇ.75.16 ರಷ್ಟು ಮತದಾನವಾಗಿತ್ತು.
ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸಂಡೂರು ಕ್ಷೇತ್ರದಲ್ಲಿ ಅವರ ಪತ್ನಿ ಅನ್ನಪೂರ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಬಿಜೆಪಿಯ ಬಂಗಾರು ಹನುಮಂತ ಸವಾಲೊಡ್ಡಿದ್ದಾರೆ.
ನವೆಂಬರ್ 13ರಂದು ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಸಂಡೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.