ಹೊಸಪೇಟೆ: ಕೆಲಸದಿಂದ ನಿವೃತ್ತರಾಗಿರುವ ಇಲ್ಲಿನ ಚಿತ್ತವಾಡ್ಗಿ ವಿಶ್ವೇಶ್ವರಯ್ಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಿಕಿ ಶರೀಫಾ ಬೇಗಂ ಅವರಿಗೆ ಮಂಗಳವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಜುಮನ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ಸನ್ಮಾನ ನೆರವೇರಿಸಿ, ‘ಶರೀಫಾ ಅವರು ಉತ್ತಮ ಕೆಲಸ ನಿರ್ವಹಿಸಿ ಶಾಲೆಗೆ ಒಳ್ಳೆಯ ಹೆಸರು ತಂದಿದ್ದಾರೆ. ಮಕ್ಕಳ ಬೆಳವಣಿಗೆಗೆ ಶ್ರಮಿಸಿದ್ದಾರೆ. ನಿವೃತ್ತಿ ನಂತರ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಶಿ ಮಾತನಾಡಿ, ‘ಶರೀಫಾ ಬೇಗಂ ಅವರು ವಾತ್ಸಲ್ಯದಿಂದ ಬೋಧನೆ ಮಾಡುತ್ತಿದ್ದರು. ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂಥಹ ಶಿಕ್ಷಕರು ಬಹಳ ಅಪರೂಪ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ಅಬ್ದುಲ್ ರೌಫ್, ಶಿಕ್ಷಕರಾದ ಆದಂ ಶಫಿ, ಮೊಹಮ್ಮದ್ ಶರೀಫ್ ಸಾಬ್, ಎಂ. ಮೆಹಬೂಬ್, ಅನ್ವರ್ ಬೇಗ್, ಅನ್ಸರ್ ಬಾಷಾ, ಮೆಹಬೂಬ್ ಸಾಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.