ADVERTISEMENT

ಬಳ್ಳಾರಿ | ಪ್ರತ್ಯೇಕ ಪ್ರಕರಣ: ಆನ್‌ಲೈನ್‌ಲ್ಲಿ ₹1.66 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:20 IST
Last Updated 29 ಜೂನ್ 2024, 16:20 IST
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ಅಧಿಕ ಲಾಭಾಂಶದ ಆಮಿಷವೊಡ್ಡಿ ಬಳ್ಳಾರಿಯ ಇಬ್ಬರಿಗೆ (ಪ್ರತ್ಯೇಕ ಪ್ರಕರಣ) ಆನ್‌ಲೈನ್‌ನಲ್ಲಿ ₹1.66 ಕೋಟಿ ವಂಚನೆ ಮಾಡಲಾಗಿದೆ.

ಈ ಸಂಬಂಧ ನಗರದ ಸೈಬರ್‌, ಆರ್ಥಿಕ ಮತ್ತು ಮಾಧಕ ವಸ್ತು (ಸಿಇಎನ್‌) ಠಾಣೆಗೆ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. 

ಸೈಬರ್‌ ವಂಚಕರು ಇಬ್ಬರಿಗೂ ಒಂದೇ ರೀತಿಯ ತಂತ್ರ ಹೆಣೆದು ವಂಚಿಸಿದ್ದಾರೆ. ಮೊದಲಿಗೆ ಇಬ್ಬರೂ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಸೇರಿದ್ದಾರೆ. ಅಲ್ಲಿ ಅವರಿಗೆ ಷೇರು ಮಾರುಕಟ್ಟೆಯ ಬಗ್ಗೆ ತರಬೇತಿ, ಮಾಹಿತಿ ನೀಡಲಾಗಿದೆ. ಬಳಿಕ ತಾವು ಹೇಳಿದ ಷೇರುಗಳ ಮೇಲೆ ಹೂಡಿಕೆ ಮಾಡಿದರೆ, ಶೇ. 5ರಿಂದ 10ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. 

ADVERTISEMENT

ಇದನ್ನು ನಂಬಿದ ಇಬ್ಬರೂ ಅವರು ಹೇಳಿದ ವಿವಿಧ ಖಾತೆಗಳಿಗೆ ತಮ್ಮ ವಿವಿಧ ಖಾತೆಗಳ ಮೂಲಕ ಹಣ ಸಂದಾಯ ಮಾಡಿದ್ದಾರೆ. ಒಬ್ಬ ವ್ಯಕ್ತಿ ₹90,18,000 ಸಂದಾಯ ಮಾಡಿದ್ದರೆ ಮತ್ತೊಬ್ಬ ವ್ಯಕ್ತಿ ₹76,66,729 ಸಂದಾಯ ಮಾಡಿದ್ದಾರೆ.  ಕೊನೆಗೆ ಅನುಮಾನ ಬಂದು ಠಾಣೆಗೆ ಬಂದು ದೂರು ನೀಡಿದ್ದಾರೆ. 

ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹16,684,729 ವಂಚನೆ ಮಾಡಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ವಂಚಿಸುವ ಪ್ರಕರಣಗಳು ಬಳ್ಳಾರಿಯಲ್ಲಿ ವಾರಕ್ಕೆ ಎರಡಾದರೂ ವರದಿಯಾಗುತ್ತಿವೆ. ಆನ್‌ಲೈನ್‌ ವಂಚಕರ ಬಗ್ಗೆ ಒಂದೆಡೆ ಜನರಲ್ಲಿ ಆಕ್ರೋಶವಿದ್ದರೆ, ಅಪರಿಚಿತರ ಮಾತು ನಂಬಿ ದೊಡ್ಡ ಪ್ರಮಾಣದ ಹಣ ಸಂದಾಯ ಮಾಡುವವರ ಬಗ್ಗೆ ಬೇಸರವೂ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.