ಕಾನಹೊಸಹಳ್ಳಿ: ಸಮೀಪದ ಹುಲಿಕೆರೆ ಗ್ರಾಮದಲ್ಲಿ ಸಿಡಿಲು ಬಡಿದು ರೇಷ್ಮೆ ಸಾಕಾಣೆ ಮನೆ ಹಾಗೂ ಮೇವಿನ ಬಣವೆಗೆ ಅಕಸ್ಮಿಕ ಬೆಂಕಿ ತಗಲಿ ಸುಟ್ಟುಭಸ್ಮವಾಗಿರುವ ಘಟನೆ ಮಂಗಳವಾರ ರಾತ್ರಿ ಜರುಗಿದೆ.
ಗ್ರಾಮದ ಗಂಗಮ್ಮ ಎಂಬುವ ತೋಟದಲ್ಲಿ ಸಂಗ್ರಹಿಸಿ ಇಟ್ಟಿದ್ದ ಮೇವಿನ ಬಣವೆಗೆ ಸಿಡಿಲಿನಿಂದ ಬೆಂಕಿ ಅವರಿಸಿದ್ದು ನಂತರ ಪಕ್ಕದಲ್ಲಿದ್ದ ರೇಷ್ಮೆ ಸಾಕಾಣೆ ಮಾಡಲು ನಿರ್ಮಿಸಿದ್ದ ಮನೆಗೆ ಬೆಂಕಿ ಅವರಿಸಿ ಸುಟ್ಟುಭಸ್ಮವಾಗಿದೆ.
ಸದ್ಯ ರೇಷ್ಮೆ ಮನೆಯಲ್ಲಿದ್ದ 200 ಮೊಟ್ಟೆಯ ರೇಷ್ಮೆ ಹುಳದ ಬೆಳೆ ನಾಶವಾಗಿ ಸಾವಿರಾರು ರೂ ನಷ್ಟವಾಗಿದೆ ಎಂದು ಕಾನಹೊಸಹಳ್ಳಿ ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.