ADVERTISEMENT

ಸಿರುಗುಪ್ಪ: ಜಿಟಿ, ಜಿಟಿ ಮಳೆ ಜತೆ ಮೋಡ ಕವಿದ ವಾತಾವರಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:29 IST
Last Updated 16 ಅಕ್ಟೋಬರ್ 2024, 14:29 IST
ಸಿರುಗುಪ್ಪದಲ್ಲಿ ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಮಳೆಯಲ್ಲಿ ಸಾಗುತ್ತಿರುವುದು
ಸಿರುಗುಪ್ಪದಲ್ಲಿ ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಮಳೆಯಲ್ಲಿ ಸಾಗುತ್ತಿರುವುದು   

ಸಿರುಗುಪ್ಪ: ತಾಲ್ಲೂಕಿನಾದ್ಯಾಂತ ಬುಧವಾರ ಬೆಳಗಿನ ಜಾವದಿಂದ ತುಂತುರು ಮಳೆಯಾಯಿತು. ಮೋಡ ಕವಿದ ವಾತಾವರಣ ವಿದ್ದು ಜಿಟಿ, ಜಿಟಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು.

ಬೆಳಗಿನಿಂದ ಮಧ್ಯಾಹ್ನದವರೆಗೆ ಮೋಡಕವಿದ ವಾತಾವರಣದಲ್ಲಿ ತುಂತು ಮಳೆ ಇದ್ದು, ಮಧ್ಯಾಹ್ನದ ನಂತರ ಬಿರುಸಿನ ಮಳೆಯಾಯಿತು. ತಾಲ್ಲೂಕು ಬುಧವಾರ ಇಡೀ ದಿನ ಮಲೆನಾಡು ಪ್ರದೇಶದಂತೆ ಕಂಗೊಳಿಸಿತು, ಜಿಟಿ ಜಿಟಿ ಮಳೆಯಿಂದಾಗಿ ಕರಾವಳಿಯ ವಾತಾವರಣ ಕಂಡುಬಂದಿತು.ಶೀತ ಹವೆ ಜನರನ್ನು ಕಾಡಿತು.

ಮುಂಜಾನೆ 5:30ಕ್ಕೆ ಆರಂಭವಾದ ಜಿಟಿ ಜಿಟಿ ಮಳೆಯು ರಾತ್ರಿಯವರೆಗೂ ಮುಂದುವರಿತು. ಸ್ವಲ್ಪ ಹೊತ್ತು ಜೋರಾಗಿ ಬರುವುದು ಮತ್ತು ನಿಲ್ಲುವದರಿಂದ ಕೆಲಸಕ್ಕೆ ಹೋಗುವ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ, ಸರ್ಕಾರಿ ನೌಕರರಿಗೆ ತೊಂದರೆಯಾಯಿತು. ದ್ವಿಚಕ್ರ ವಾಹನಗಳಲ್ಲಿ, ಕಾಲು ನಡಿಗೆಯಲ್ಲಿ ಸಾಗುತ್ತಿದ್ದವರು ಅನಿವಾರ್ಯವಾಗಿ ಆಟೋಗಳನ್ನು ಅವಲಂಬಿಸಬೇಕಾಯಿತು. ನಿರಂತರ ಮಳೆಯಿಂದಾಗಿ ಜನಸಾಮಾನ್ಯರ ಓಡಾಟಕ್ಕೂ ತೋಂದರೆಯಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.