ಸಿರುಗುಪ್ಪ (ಬಳ್ಳಾರಿ): ಪ್ರೀತಿಗೆ ತಮ್ಮ ಕುಟುಂಬದವರು ಒಪ್ಪಲಿಲ್ಲ ಎಂದು ನೊಂದುಕೊಂಡು ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿರುಗುಪ್ಪ ನಗರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ಪವಿತ್ರಾ (19)ಮತ್ತು ರಾಜ(24)ಮೃತ ಪ್ರೇಮಿಗಳು.
ಇಬ್ಬರ ಮೃತದೇಹಗಳೂ ಜಮೀನಲ್ಲಿ ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಿರುಗುಪ್ಪ ಪೊಲೀಸರು, ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.