ADVERTISEMENT

ಸಂಡೂರು ಬಸ್ ವೇಳೆ ಸಮಸ್ಯೆ ಬಗೆಹರಿಸಲು ಕ್ರಮ: ಇನಾಯತ್ ಬಗ್ಬಾನ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 16:02 IST
Last Updated 26 ನವೆಂಬರ್ 2024, 16:02 IST
ಸಂಡೂರು ತಾಲ್ಲೂಕಿನ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಓಡಾಟಕ್ಕೆ 10 ಹೊಸ ಬಸ್‌ಗಳನ್ನು ಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಇನಾಯತ್ ಬಗ್ಬಾನ್ ಅವರಿಗೆ ಮನವಿ ಸಲ್ಲಿಸಲಾಯಿತು
ಸಂಡೂರು ತಾಲ್ಲೂಕಿನ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಓಡಾಟಕ್ಕೆ 10 ಹೊಸ ಬಸ್‌ಗಳನ್ನು ಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಇನಾಯತ್ ಬಗ್ಬಾನ್ ಅವರಿಗೆ ಮನವಿ ಸಲ್ಲಿಸಲಾಯಿತು   

ಸಂಡೂರು: ಹೊಸಪೇಟೆ, ಕೂಡ್ಲಿಗಿ ಹಾಗೂ ಬಳ್ಳಾರಿಯಿಂದ ರಾತ್ರಿ ಸಂಡೂರಿಗೆ ಆಗಮಿಸುವ ಪ್ರಯಾಣಿಕರಿಗೆ 8 ಗಂಟೆಯ ನಂತರ ಬಸ್‌ಗಳು ಬಾರದೆ ತೊಂದರೆಯಾಗುತ್ತಿದ್ದು, ಶೀಘ್ರದಲ್ಲೇ ರಾತ್ರಿ ಬರುವ ಬಸ್‌ಗಳ ಸಮಯದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಬಳ್ಳಾರಿ ವಿಭಾಗೀಯ ನಿಯಂತ್ರಕ ಇನಾಯತ್ ಬಗ್ಬಾನ್ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದು ಸಮಸ್ಯೆಯ ತೀವ್ರತೆ ಕುರಿತು ಮನವರಿಕೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸಂಡೂರು ಡಿಪೋದಲ್ಲಿ ಮಂಗಳವಾರ ರೈತ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಸಂಡೂರಿಗೆ ಹೊಸಪೇಟೆಯಿಂದ ಬರುವ ಬಸ್ ರಾತ್ರಿ 10 ಗಂಟೆಗೆ ನಿರ್ಗಮಿಸುವುದು, ಕೂಡ್ಲಿಗಿಯಿಂದ ಬರುವ ಬಸ್ ಸಮಯವನ್ನು ರಾತ್ರಿ 9 ರ ವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಬಳ್ಳಾರಿ –ಸಂಡೂರು ಕೊನೆಯ ಬಸ್ ರಾತ್ರಿ 9ಕ್ಕೆ ಬಿಡುತ್ತಿದ್ದು, ಯಥಾಸ್ಥಿತಿ ಇರಲಿದೆ. ದೇವಗಿರಿ –ಸಂಡೂರು –ದೇವಗಿರಿ ಬಸ್‌ಗಳು ಕುಮಾರಸ್ವಾಮಿ ದೇವಸ್ಥಾನದ ಆವರಣಕ್ಕೆ ಬಂದು ಅಲ್ಲಿನ ಪ್ರಯಾಣಿಕರನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಓಡಾಟಕ್ಕೆ ಹೆಚ್ಚುವರಿ 10 ಬಸ್‌ಗಳನ್ನು ಬಿಡುವಂತೆ ಸಂಘಟನೆಯಿಂದ ಮನವಿ ಮಾಡಲಾಯಿತು.

ಸಭೆಯಲ್ಲಿ ವಿಭಾಗೀಯ ಸಂಚಾರ ನಿಯಂತ್ರಕಾರದ ಚಾಮರಾಜ, ವಿಭಾಗೀಯ ಸಂಚಾರ ನಿರೀಕ್ಷಕಿ ಅನ್ನಪೂರ್ಣ, ಸಹಾಯಕ ಸಂಚಾರ ನಿರೀಕ್ಷಕಿ ಈರಮ್ಮ, ಸಂಡೂರು ಡಿಪೋ ವ್ಯವಸ್ಥಾಪಕ ಲಕ್ಷ್ಮಣ್‌, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಂಚಾಲಕರಾದ ಈರಣ್ಣ ಮೂಲಿಮನಿ, ಎಂ.ಎಲ್‌.ಕೆ ನಾಯ್ಡು, ಶಾಂತಪ್ಪ, ಮೌನೇಶ್‌, ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಟಿ.ಎಂ.ಶಿವಕುಮಾರ್‌, ಶ್ರೀಶೈಲ ಆಲದಳ್ಳಿ, ಜಿಕೆ ನಾಗರಾಜ ಮಂಜುನಾಥ ಟಿಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.