ADVERTISEMENT

ತೆಕ್ಕಲಕೋಟೆ: ಮಿತಿ ಮೀರಿದ ಬೀದಿ ನಾಯಿ ಹಾವಳಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 5:15 IST
Last Updated 11 ನವೆಂಬರ್ 2024, 5:15 IST
<div class="paragraphs"><p>ತೆಕ್ಕಲಕೋಟೆ ಪಟ್ಟಣದ 3ನೇ ವಾರ್ಡ್‌ನ ಮುಖ್ಯ ರಸ್ತೆಯಲ್ಲಿನ ಬೀದಿನಾಯಿಗಳು</p></div>

ತೆಕ್ಕಲಕೋಟೆ ಪಟ್ಟಣದ 3ನೇ ವಾರ್ಡ್‌ನ ಮುಖ್ಯ ರಸ್ತೆಯಲ್ಲಿನ ಬೀದಿನಾಯಿಗಳು

   

ತೆಕ್ಕಲಕೋಟೆ: ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಬೀದಿ ನಾಯಿಗಳು ಹಾಗೂ ಹುಚ್ಚು ನಾಯಿಗಳು ಮಕ್ಕಳ ಮೇಲೆ, ದಾರಿಹೋಕರ ಮೇಲೆ ದಾಳಿ ನಡೆಸುವ ಪ್ರಕರಣಗಳು ನಡೆಯುತ್ತಲೇ ಇದ್ದರೂ ಪರಿಹಾರ ಮಾತ್ರ ಶೂನ್ಯ ಎಂಬಂತಾಗಿದೆ.

ಇತ್ತೀಚಿಗೆ ಕೆಂಚನಗುಡ್ಡ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ 17 ಜನ ಒಳಗಾಗಿದ್ದರು. ತೆಕ್ಕಲಕೋಟೆ, ಕರೂರು, ರಾವಿಹಾಳ್ ಹಾಗೂ ಸಿರುಗುಪ್ಪ ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಬೇಸರಿಸುತ್ತಿದ್ದಾರೆ.

ADVERTISEMENT

ಸಿರುಗುಪ್ಪ ನಗರ ಹಾಗೂ ತೆಕ್ಕಲಕೋಟೆ ಪಟ್ಟಣದಲ್ಲಿ ಸೀಮಾಂಧ್ರ ದಿಂದ ನಾಯಿಗಳನ್ನು ತಂದು ಬಿಡುತ್ತಿ ದ್ದಾರೆ. ಇದರಿಂದಾಗಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ತಿಂಗಳವಾರು ಲೆಕ್ಕಾಚಾರದ ಪ್ರಕಾರ ಆಗಸ್ಟ್‌ನಲ್ಲಿ 202, ಸೆಪ್ಟೆಂಬರ್ 181, ಅಕ್ಟೋಬರ್ ತಿಂಗಳಲ್ಲಿ 183 ಬೀದಿನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಕಳೆದ ಆರು ತಿಂಗಳಲ್ಲಿ 1,357 ಪ್ರಕರಣ ದಾಖಲಾ ಗಿದ್ದು, ತಿಂಗಳಿಗೆ ಸರಾಸರಿ 250ಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ. ಇದರಲ್ಲಿ ಬಹುತೇಕರು ಮಕ್ಕಳೇ.

2020ರ ಜಾನುವಾರು ಸಮೀಕ್ಷೆಯಲ್ಲಿ 2,680 ಬೀದಿನಾಯಿಗಳನ್ನು ಗುರುತಿಸಲಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ನಗರ ಪಾಲಿಕೆ, ಪಟ್ಟಣ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳು ಜಿಲ್ಲಾಡಳಿತದ ಕಡೆಗೆ ಮುಖ ಮಾಡಿದ್ದು, ಸಂತಾನಶಕ್ತಿಹರಣ ಚಿಕಿತ್ಸೆ ಅಥವಾ ಬೇರಾವುದೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅಥವಾ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಕ್ತ ನಿರ್ದೇಶನಕ್ಕೆ ಕಾಯುವಂತಾಗಿದೆ.

‘ಚುಚ್ಚುಮದ್ದು ದಾಸ್ತಾನು’

‘ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಎಲ್ಲಾ ಪಿಎಚ್‌ಸಿ ಮತ್ತು ಸಿಎಚ್‌ಸಿಗಳಲ್ಲಿ ಅಗತ್ಯ ಪ್ರಮಾಣದ ಚುಚ್ಚುಮದ್ದು ದಾಸ್ತಾನು ಮಾಡಲಾಗಿದೆ. ಪ್ರಕರಣಗಳ ಗಂಭೀರತೆಯ ಬಗ್ಗೆ ಸೂಕ್ತ ಕ್ರಮ ವಹಿಸಲು ಸ್ಥಳೀಯ ಆಡಳಿತಕ್ಕೆ ಪತ್ರದ ಮುಖಾಂತರ ತಿಳಿಸಲಾಗಿದೆ’ ಎಂದು ಸಿರುಗುಪ್ಪ ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರೇಂದ್ರ ಕುಮಾರ್ ತಿಳಿಸಿದರು.

ಬೀದಿನಾಯಿಗಳನ್ನು ಗುರುತಿಸಿ, ಅನುದಾನ ಮೀಸಲು ಇಡಲು ತೀರ್ಮಾನಿಸಲಾಗಿದೆ. 2025ರ ಮಾರ್ಚ್ ನಂತರ ಕ್ರಮ ಕೈಗೊಳ್ಳಲಾಗುವುದು
ಪರಶುರಾಮ ಮುಖ್ಯಾಧಿಕಾರಿ, ತೆಕ್ಕಲಕೋಟೆ
ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ಹಾಕಲಾಗುವುದು. ಸ್ಥಳೀಯ ಆಡಳಿತವು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ಕ್ರಮವಹಿಸಿದರೆ ನೆರವು ನೀಡಲಾಗುವುದು
ಹನುಮಂತಪ್ಪ ಎಚ್.ದಾಸರ ಜಾನುವಾರು ಅಧಿಕಾರಿ, ತೆಕ್ಕಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.