ADVERTISEMENT

ಧರಣಿ ಕೈಬಿಟ್ಟ ಪುರ್ವಸತಿ ಕಲ್ಪಿತ ದೇವದಾಸಿಯರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:49 IST
Last Updated 3 ಜುಲೈ 2024, 14:49 IST
ಕುರುಗೋಡಿನ ತಹಶೀಲ್ದಾರ್ ಕಚೇರಿ ಎದುರು ಪುನರ್ವಸತಿ ಕಲ್ಪಿಸಿ ದೇವದಾಸಿಯರು ನಡೆಸುತ್ತಿರುವ ಧರಣಿಸ್ಥಳಕ್ಕೆ ಅಧಿಕಾರಿಗಳು ಭೇಟಿನೀಡಿ ಮನವಿಸ್ವೀಕರಿಸಿದರು
ಕುರುಗೋಡಿನ ತಹಶೀಲ್ದಾರ್ ಕಚೇರಿ ಎದುರು ಪುನರ್ವಸತಿ ಕಲ್ಪಿಸಿ ದೇವದಾಸಿಯರು ನಡೆಸುತ್ತಿರುವ ಧರಣಿಸ್ಥಳಕ್ಕೆ ಅಧಿಕಾರಿಗಳು ಭೇಟಿನೀಡಿ ಮನವಿಸ್ವೀಕರಿಸಿದರು   

ಕುರುಗೋಡು: ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಪುರ್ವಸತಿ ಕಲ್ಪಿತ ದೇವದಾಸಿಯರ ಸಂಘದ ಸದಸ್ಯರು ಕತಶೀಲ್ದಾರ್ ಕಚೇರಿ ಎದುರು ಮಂಗಳವಾರದಿಂದ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಅಧಿಕಾರಿಗಳ ಭರವಸೆಯ ಮೇರೆಗೆ ಕೈಬಿಟ್ಟರು.

ಪುರ್ವಸತಿ ಕಲ್ಪಿತ ದೇವದಾಸಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಯಂಕಮ್ಮ ಮಾತನಾಡಿ, ಪ್ರತಿ ತಿಂಗಳು ಮಾಸಾಶನ, ನಿವೇಶನ, ಮನೆ ನಿರ್ಮಾಣಕ್ಕೆ ₹ 6 ಲಕ್ಷ ಸಹಾಯಧನ, ದೇವದಾಸಿಯರ ಪುನರ್ ಗಣತಿ ಮಾಡಿಸಿ ಅವರಿಗೆ ಸರ್ಕಾರಿ ಸೌಲಭ್ಯ, ಮಾಜಿ ದೇವದಾಸಿಯರಿಗೆ ದೃಢೀಕರಣ ಪತ್ರ, 5 ಎಕರೆ ಕೃಷಿ ಭೂಮಿ, ಕೊಳವೆಬಾವಿ ಕೊರೆಯಸಲು ಸಹಾಯಧನ, ದೇವದಾಸಿ ಮಕ್ಕಳಿಗೆ ಗುಡಿಕೈಗಾರಿಕೆ ನಡೆಸಲು ವಿಶೇಷ ತರಬೇತಿ ಆಯೋಜಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ದೇವದಾಸಿ ಯೋಜನೆಯ ಜಿಲ್ಲಾಧಿಕಾರಿ ಸುಧಾ ಚೌದ್ರಿ, ಸರ್ಕಾರದಿಂದ ದೊರೆಯುವ ಸೌಲಭ್ಯ ತಲುಪಿಸುವ ಭರವಸೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆದರು. ತಾಲ್ಲೂಕು ಯೋಜನಾಧಿಕಾರಿ ಮುಕ್ಕಣ್ಣಪ್ಪ, ಕಾರ್ಯದರ್ಶಿ ಸಿ.ವೀರೇಶ್, ಸಂಜೀವಮ್ಮ, ಲಕ್ಷ್ಮಿ, ಹನುಮಕ್ಕ, ಹುಲಿಗೆಮ್ಮ, ಜ್ಯೋತಿ, ದೊಡ್ಡಬಸಮ್ಮ ಮತ್ತು ಗೌರಮ್ಮ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.