ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಪಕ್ಷಿಗಳ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ವಿ.ವಿ. ಪರಿಸರದಲ್ಲಿರುವ ಮರಗಳಿಗೆ ತಟ್ಟೆಯಾಕಾರದ ಮಣ್ಣಿನ ಮಡಿಕೆಗಳನ್ನು ನೇತು ಹಾಕಿ, ನಿತ್ಯ ಅವುಗಳಲ್ಲಿ ನೀರು ಹಾಕುತ್ತಿದ್ದಾರೆ. ವಿ.ವಿ. ಆವರಣದಲ್ಲಿ ನೆಲೆಸಿರುವ ವಿವಿಧ ಜಾತಿಯ ಪಕ್ಷಿಗಳು ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿವೆ.
ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಬಿಡುವು ಸಿಕ್ಕಾಗ ಮಡಿಕೆಗಳಲ್ಲಿ ನೀರು ಹಾಕುವ ಕೆಲಸ ಮಾಡುತ್ತಿದ್ದಾರೆ.
‘ಬೇಸಿಗೆಯಲ್ಲಿ ಬಹುತೇಕ ಜಲಮೂಲಗಳು ಬತ್ತಿ ಹೋಗಿರುವುದರಿಂದ ಹನಿ ನೀರಿಗಾಗಿ ಪಕ್ಷಿಗಳು ಪರದಾಟ ನಡೆಸುವಂತಹ ಪರಿಸ್ಥಿತಿ ಇದೆ. ಇದನ್ನು ಮನಗಂಡು ಕೆಲವು ಮರಗಳಲ್ಲಿ ಮಡಿಕೆಗಳನ್ನು ನೇತು ಹಾಕಿ ನೀರು ಹಾಕುತ್ತಿದ್ದೇವೆ. ಪಕ್ಷಿಗಳು ಬಂದು ನೀರು ಕುಡಿದು ಹೋಗುತ್ತಿವೆ. ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದು ಇಲ್ಲ ಎಂದು ಭಾವಿಸಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಶೋಧನಾ ವಿದ್ಯಾರ್ಥಿ ಗಿರೀಶ್ ಕುಮಾರ ಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.