ADVERTISEMENT

ಹರಪನಹಳ್ಳಿ | ಹಲವಾಗಲು-ಗರ್ಭಗುಡಿ ರಸ್ತೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:39 IST
Last Updated 20 ಜುಲೈ 2024, 14:39 IST
ಹರಪನಹಳ್ಳಿ ತಾಲ್ಲೂಕು ಹಲುವಾಗಲು –ಗರ್ಭಗುಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರು ನುಗ್ಗಿರುವುದು
ಹರಪನಹಳ್ಳಿ ತಾಲ್ಲೂಕು ಹಲುವಾಗಲು –ಗರ್ಭಗುಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರು ನುಗ್ಗಿರುವುದು   

ಹರಪನಹಳ್ಳಿ: ತುಂಗಾಭದ್ರಾ ನದಿಯಲ್ಲಿ ನೀರಿನ ಪ್ರಮಾಣ ನಿಧಾನಗತಿಯಲ್ಲಿ ಏರಿಕೆ ಆಗುತ್ತಿದ್ದು, ನದಿಪಾತ್ರಕ್ಕೆ ಹೊಂದಿಕೊಂಡಿರುವ ನದಿಪಾತ್ರದಲ್ಲಿರುವ ಜಮೀನುಗಳತ್ತ ನೀರು ನುಗ್ಗಿ ಬರುತ್ತಿದ್ದು, ಹಲುವಾಗಲು –ಗರ್ಭಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ.

ಹಲುವಾಗಲು ಶಿವನಯ್ಯನ ಹಳ್ಳದವರೆಗೂ ನದಿ ನೀರು ನುಗ್ಗಿ ಬಂದಿರುವ ಎರಡು ಭಾಗದಲ್ಲಿ ರಸ್ತೆ ಜಲಾವೃತವಾಗಿದೆ. ರಸ್ತೆಯಲ್ಲಿ ಒಂದು ಅಡಿ ನೀರು ಬಂದಿದೆ. ವಾಹನ ಸಂಚಾರಕ್ಕೆ ಶನಿವಾರ ಸಂಜೆತನಕ ಅಡಚಣೆಯಾಗಿಲ್ಲ ಎಂದು ತಹಶೀಲ್ದಾರ್‌ ಬಿ.ವಿ.ಗಿರೀಶ್ ಬಾಬು ತಿಳಿಸಿದ್ದಾರೆ.

ತಾವರಗುಂದಿ, ನಿಟ್ಟೂರು, ನಿಟ್ಟೂರು ಬಸಾಪುರ, ಹಲುವಾಗಲು, ಗರ್ಭಗುಡಿ ವ್ಯಾಪ್ತಿಯಲ್ಲಿ ನದಿಯು ಮೈದುಂಬಿ ಹರಿಯುತ್ತಿದೆ. ನಿತ್ಯ ನಿಧಾನಗತಿಯಲ್ಲಿ ನೀರು ಏರಿಕೆ ಆಗುತ್ತಿದ್ದು, ನಿಟ್ಟೂರಿನಲ್ಲಿ ರೈತರ ಜಮೀನುಗಳತ್ತ ಏರಿ ಬರುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ADVERTISEMENT
ಹರಪನಹಳ್ಳಿ ತಾಲ್ಲೂಕು ತಾವರಗುಂದಿ ಗ್ರಾಮ ಸಮೀಪ ಮೈದುಂಬಿರುವ ತುಂಗಭದ್ರಾ ನದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.