ADVERTISEMENT

ಸಂಡೂರು | ಕಳ್ಳರಿಂದ ₹ 11.10 ಲಕ್ಷ ಮೌಲ್ಯದ 238 ಗ್ರಾಂ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 5:52 IST
Last Updated 17 ಜೂನ್ 2024, 5:52 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸಂಡೂರು: ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಮಹಿಳೆಯರ ಮಾಂಗಲ್ಯ ಸರ ಒಳಗೊಂಡಂತೆ 6 ಚಿನ್ನದ ಸರಗಳು ಸೇರಿ ಒಟ್ಟು 238 ಗ್ರಾಂ ತೂಕದ ಆಭರಣ ವಶಪಡಿಸಿಕೊಂಡು, ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ಸಂಡೂರು ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಸ್‌ ಹಾಗೂ ಜಾತ್ರೆಗಳಲ್ಲಿ ಸರಗಳ್ಳತನಗಳಾದ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಈ ಬಗ್ಗೆ ಮುತುವರ್ಜಿ ವಹಿಸಿ ತಾವು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ.ರವಿಕುಮಾರ್, ನವೀನ್ ಕುಮಾರ್, ಡಿವೈಎಸ್ಪಿ ಪ್ರಸಾದ್ ಗೋಖಲೆ ಅವರ ಮಾರ್ಗದರ್ಶನದಲ್ಲಿ ಒಂದು ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ADVERTISEMENT

ಸಂಡೂರು ವೃತ್ತ ನಿರೀಕ್ಷಕ ಮಹೇಶ್ ಗೌಡ, ಕುರುಗೋಡು ಸಿಪಿಐ ವಿಶ್ವನಾಥ ಹಿರೇಗೌಡರ ನೇತೃತ್ವ ದಲ್ಲಿ ಪಿಎಸ್‌ಐಗಳಾದ ವೀರೇಶ್.ಡಿ.ಮಾಳಶೆಟ್ಟಿ, ನಾಗರತ್ನಮ್ಮ.ಕೆ, ರೇವಣ ಸಿದ್ದಪ್ಪ ಹಾಗೂ ಸಿಬ್ಬಂದಿ  ಅಲೂರಯ್ಯ, ರುದ್ರಪ್ಪ, ವಸೂರಪ್ಪ, ನಾಸಿರ್, ನಾಗೇಶ್ ರೆಡ್ಡಿ, ವಿಜಯ್ ಕುಮಾರ್, ತಿಪ್ಪೇಸ್ವಾಮಿ ತಂಡ ತನಿಖೆ ನಡೆಸಿ ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಕಳ್ಳತನವಾಗಿದ್ದ 3, ಚೋರ ನೂರು ಠಾಣೆಯ 2 ಹಾಗೂ ಕುಡುತಿನಿ ಠಾಣೆಯ 1 ಸೇರಿ ಒಟ್ಟು 6 ಸರ ಸೇರಿ 11.10 ಲಕ್ಷ ಮೌಲ್ಯದ 238 ಗ್ರಾಂ ಚಿನ್ನ ವಶಪಡಿಸಿಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಪಿಗಳು ವಿಜಯನಗರ ಜಿಲ್ಲೆಯ ಕಾರಿಗನೂರು ಕ್ಯಾಂಪ್ ನಿವಾಸಿ ಗಳಾದ ಬಲೂನ್‌ ಮಾರಾಟಗಾರರ ವೇಷದ ಚೆನ್ನವ್ವ ಹಾಗೂ ಹನುಮವ್ವ ಎಂಬುವರನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಯಶಸ್ವಿ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.