ADVERTISEMENT

ತೋರಣಗಲ್ಲು | ಕರಡಿಗಳ ಕಾಟ: ಆತಂಕದಲ್ಲಿ ಜನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:35 IST
Last Updated 7 ಜುಲೈ 2024, 14:35 IST

ತೋರಣಗಲ್ಲು: ಸಮೀಪದ ತಾರಾನಗರ ಗ್ರಾಮದ ಕಾರ್ತಿಕೇಯ ಪ್ರೌಢಶಾಲೆಯ ಆವರಣದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ಮೂರು ಸ್ಥಳಗಳಲ್ಲಿ ಕರಡಿಗಳು ನಿರಂತರವಾಗಿ ಕಾಣಿಕೊಳ್ಳುತ್ತಿದ್ದು, ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕರಡಿಯು ಶುಕ್ರವಾರ ತಡರಾತ್ರಿ ಗ್ರಾಮದ ಕಾರ್ತಿಕೇಯ ಪ್ರೌಢಶಾಲೆಯ ಆವರಣದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳಗೆ ನುಗ್ಗಿರುವ ದೃಶ್ಯಾವಳಿಯನ್ನು ಜನರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಜನರು ಗಲಾಟೆ ನಡೆಸಿದ್ದರಿಂದ ಕರಡಿಯು ಓಡಿ ಹೋಗಿದೆ.

ಕಳೆದ ವರ್ಷವೂ ಕರಡಿಯು ಗ್ರಾಮದ ಒಳಕ್ಕೆ ನುಗ್ಗಿ ಜನರನ್ನು ಭಯಪಡಿಸಿತ್ತು. ಜನರ ಮನವಿಯ ಮೇರೆಗೆ ಅರಣ್ಯ ಇಲಖೆಯವರು ಬೋನ್ ಅಳವಡಿಸಿ ಸೆರೆ ಹಿಡಿದಿದ್ದರು. ಈ ವರ್ಷ ಮತ್ತೆ ಕರಡಿಯು ಗ್ರಾಮದ ಒಳಗೆ ನುಗ್ಗಿದ್ದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

‘ಕರಡಿಯನ್ನು ತ್ವರಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದೆ’ ಎಂದು ತಾರಾನಗರ ಗ್ರಾಮ ಪಂಚಾಯಿತಿ ಪಿಡಿಒ ಪ್ರಭುವನಗೌಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.