ADVERTISEMENT

ತುಂಗಾ ಜಲಾಶಯದ ಹೊರಹರಿವು ಕಡಿಮೆ, ಸ್ವಲ್ಪ ತಗ್ಗಿದ ಒಳಹರಿವು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 10:17 IST
Last Updated 10 ಆಗಸ್ಟ್ 2020, 10:17 IST
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸೋಮವಾರ ಸ್ವಲ್ಪ ತಗ್ಗಿದೆ. ಮಲೆನಾಡಿನಲ್ಲಿ ಮಳೆ ತಗ್ಗಿದ್ದು, ಶಿವಮೊಗ್ಗದ ತುಂಗಾ ಜಲಾಶಯದ ಒಳಹರಿವು ಕಡಿಮೆಯಾಗಿದೆ. ನೀರು ಹೊರಬಿಡುವುದನ್ನು ಕಡಿಮೆ ಮಾಡಿರುವುದರಿಂದ ಸಹಜವಾಗಿಯೇ ತುಂಗಭದ್ರಾ ಅಣೆಕಟ್ಟೆಯ ಒಳಹರಿವು ಕಮ್ಮಿಯಾಗಿದೆ.

ಅಲ್ಪ ಪ್ರಮಾಣದಲ್ಲಿ ಒಳಹರಿವು ತಗ್ಗಿದರೂ ಜಲಾಶಯಕ್ಕೆ ನಿತ್ಯ 8ರಿಂದ 9 ಟಿಎಂಸಿ ನೀರು ಹರಿದು ಬರುತ್ತಿದೆ. ಇದೇ ರೀತಿ ಒಳಹರಿವು ಇದ್ದರೆ ಮೂರು ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಭರವಸೆ ವ್ಯಕ್ತಪಡಿಸಿದೆ.

ಸೋಮವಾರ 1,16,827 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಭಾನುವಾರ 1,17,403 ಕ್ಯುಸೆಕ್‌, ಶನಿವಾರ 1,01,002 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ADVERTISEMENT

1,633 ಅಡಿ (101 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,624.85 ಅಡಿ (72.43 ಟಿಎಂಸಿ) ನೀರಿನ ಸಂಗ್ರಹವಿದೆ. ಕಳೆದ 24 ಗಂಟೆಗಳಲ್ಲಿ ಅಣೆಕಟ್ಟೆಗೆ ಒಂದುವರೆ ಅಡಿ ನೀರು ಬಂದಿದೆ. ಶನಿವಾರ ನಾಲ್ಕುವರೆ ಅಡಿ ನೀರು ಜಲಾಶಯಕ್ಕೆ ಬಂದಿತ್ತು. ಈ ವರ್ಷ ಅತಿ ಹೆಚ್ಚು ನೀರು ಬಂದ ದಿನ. 8,514 ಕ್ಯುಸೆಕ್‌ ನೀರು ಕಾಲುವೆಗಳಿಗೆ ಸದ್ಯ ಹರಿಸಲಾಗುತ್ತಿದೆ.

ಭಾನುವಾರ 70,876 ಕ್ಯುಸೆಕ್‌ ಇದ್ದ ತುಂಗಾ ಜಲಾಶಯದ ಒಳಹರಿವು ಸೋಮವಾರ 49,261 ಕ್ಯುಸೆಕ್‌ಗೆ ತಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.