ADVERTISEMENT

ಸಂಡೂರು: ಭಾರಿ ಮಳೆಗೆ ಜಲಾವೃತಗೊಂಡ ವಾಹನಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:57 IST
Last Updated 5 ಅಕ್ಟೋಬರ್ 2024, 15:57 IST
ಮಳೆಯಿಂದಾಗಿ ಸಂಡೂರು ತಾಲ್ಲೂಕಿನ ನಂದಿಹಳ್ಳಿ ವಾಷಿಂಗ್‌ ಪ್ಲಾಂಟ್‌ನಲ್ಲಿ ಲಾರಿಗಳು ಜಲಾವೃತಗೊಂಡಿದ್ದವು
ಮಳೆಯಿಂದಾಗಿ ಸಂಡೂರು ತಾಲ್ಲೂಕಿನ ನಂದಿಹಳ್ಳಿ ವಾಷಿಂಗ್‌ ಪ್ಲಾಂಟ್‌ನಲ್ಲಿ ಲಾರಿಗಳು ಜಲಾವೃತಗೊಂಡಿದ್ದವು   

ಸಂಡೂರು: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ದಾಖಲೆ ಮಳೆ ಸುರಿದಿದೆ.

ಮಳೆಗೆ ತಾಲ್ಲೂಕಿನ ಬಹುತೇಕ ಹಳ್ಳ–ಕೊಳ್ಳಗಳು ತುಂಬಿವೆ. ನಾರಿಹಳ್ಳ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸಂಡೂರಿನಲ್ಲಿ 15.18 ಸೆಂ.ಮೀ, ಚೋರನೂರು– 8.42 ಸೆಂ.ಮೀ, ಕುರೆಕುಪ್ಪ– 6.3 ಸೆಂ.ಮೀ, ಹಾಗೂ ವಿಠಲಾಪುರದಲ್ಲಿ 5.82 ಸೆಂ.ಮೀ ಮಳೆಯಾಗಿದೆ.

ಮಳೆಯಿಂದಾಗಿ ಚೋರನೂರು ಹೋಬಳಿಯ ಅಂಕಮ್ಮನಾಳ ಗ್ರಾಮದ ಓಬಯ್ಯನವರ ಮನೆ ಹಾನಿಯಾಗಿದೆ. ಇಲ್ಲಿನ ನಂದಿಹಳ್ಳಿ ವಾಷಿಂಗ್ ಪ್ಲಾಂಟ್‌ಗಳಲ್ಲಿ ನಿಲ್ಲಿಸಿದ್ದ ಲಾರಿಗಳಲ್ಲಿ ನೀರು ನುಗ್ಗಿ ಜಲಾವೃತಗೊಂಡು ಕೆಲ ಕಾಲ‌ ಚಾಲಕರು ಪರದಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.