ADVERTISEMENT

ಶಾಸಕ ನಾಗೇಂದ್ರ ವಿರುದ್ಧದ ದಾಖಲೆ ಬಿಚ್ಚಿಡುವೆ: ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:14 IST
Last Updated 17 ಅಕ್ಟೋಬರ್ 2024, 16:14 IST
<div class="paragraphs"><p>ಜನಾರ್ದನ ರೆಡ್ಡಿ</p></div>

ಜನಾರ್ದನ ರೆಡ್ಡಿ

   

ಬಳ್ಳಾರಿ: ‘ಕಾಂಗ್ರೆಸ್ ಸರ್ಕಾರಗಳನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎನ್ನುತ್ತಿರುವ ಶಾಸಕ ನಾಗೇಂದ್ರ ಎರಡು ವರ್ಷ ಜೈಲಲ್ಲಿ ಇದ್ದಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂಬುದು ಮರೆಯಬಾರದು. ಬಿಜೆಪಿ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದರೆ ಅವರ ವಿರುದ್ಧದ ಆರೋಪ ಪಟ್ಟಿ ಬಿಚ್ಚಿಡುವೆ’ ಎಂದು ಶಾಸಕ ಜನಾರ್ದನ ರೆಡ್ಡಿ ಎಚ್ಚರಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘ನನ್ನನ್ನು ಜೈಲಿಗೆ ಹಾಕಿದ್ದು ಯುಪಿಐ ಸರ್ಕಾರ. ನಾಗೇಂದ್ರ ಮತ್ತು ಸಂಗಡಿಗರು ಜಿಲ್ಲೆಯಲ್ಲಿ ಮಾಡುತ್ತಿದ್ದ ಅಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ನಾನು ಸರಿಯಾಗಿ ನಿಭಾಯಿಸಿರಲಿಲ್ಲ ಎಂಬುದು ನನ್ನ ಮೇಲಿನ ಆರೋಪವಾಗಿತ್ತು. ನಾನು ನಾಲ್ಕು ವರ್ಷ ಜೈಲಲ್ಲಿದ್ದೆ. ನಾಗೇಂದ್ರ ಕೂಡ ಎರಡು ವರ್ಷ ಇದ್ದರು’ ಎಂದರು. 

ADVERTISEMENT

‘ನಾಗೇಂದ್ರ ಹೀಗೆ ಮಾತನಾಡುವುದನ್ನು ಮುಂದುವರಿಸಿದರೆ, ಅಕ್ರಮ ಗಣಿಗಾರಿಕೆಯಲ್ಲಿ ನಾಗೇಂದ್ರ ಪಾತ್ರದ ಕುರಿತ ಚಾರ್ಜ್‌ಶೀಟ್‌ ಅನ್ನು ಜನರ ಮುಂದಿಡುವೆ’ ಎಂದು ತಿಳಿಸಿದರು.  

‘ಸಚಿವರಾದ ಬಳಿಕ ನಾಗೇಂದ್ರ ವಾಲ್ಮೀಕಿ ನಿಗಮದಲ್ಲಿ ಅವ್ಯಹಾರ ಮಾಡಿದ್ದಾರೆ. ವಿಮಾನ ಟಿಕೇಟ್, ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಮನೆ ಕೆಲಸಗಾರರಿಗೆ ನಿಗಮ ಹಣ ಬಳಿಸಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳದ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ’ ಎಂದು ಆರೋಪಿಸಿದರು. 

ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ ಶ್ರೀರಾಮುಲು ಸಂಡೂರು ಉಪಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡು ಚುನಾವಣೆ ಸೋತಿರುವುದರಿಂದ ಅವರು ಬೇಸರದಲ್ಲಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.