ADVERTISEMENT

ಸಂಡೂರು | ಮುರಿದುಬಿದ್ದ ಪವನ ವಿದ್ಯುತ್ ಯಂತ್ರ: ಬೆಳೆಗೆ ಹಾನಿ 

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 6:11 IST
Last Updated 19 ಜುಲೈ 2024, 6:11 IST
<div class="paragraphs"><p>ಜೆಎಸ್‌ಡಬ್ಲ್ಯೂ ಕಂಪನಿ ಒಡೆತನದ ಪವನ ವಿದ್ಯುತ್ ಯಂತ್ರ ಮುರಿದು ಬಿದ್ದಿರುವುದು</p></div>

ಜೆಎಸ್‌ಡಬ್ಲ್ಯೂ ಕಂಪನಿ ಒಡೆತನದ ಪವನ ವಿದ್ಯುತ್ ಯಂತ್ರ ಮುರಿದು ಬಿದ್ದಿರುವುದು

   

ಸಂಡೂರು (ಬಳ್ಳಾರಿ): ತಾಲ್ಲೂಕಿನ ಚೋರನೂರು‌ ಹೋಬಳಿಯ ಕಾಳಿಂಗೇರಿ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಾಳ್ ಗ್ರಾಮದ ಜಮೀನೊಂದರಲ್ಲಿ ಹಾಕಲಾಗಿದ್ದ, ಜೆಎಸ್‌ಡಬ್ಲ್ಯೂ ಕಂಪನಿ ಒಡೆತನದ ಪವನ ವಿದ್ಯುತ್ ಯಂತ್ರ ಮುರಿದು ಬಿದ್ದಿದೆ. 

ಇಂದು (ಶುಕ್ರವಾರ) ಮುಂಜಾನೆ ಈ ಘಟನೆ ಜರುಗಿದೆ. ರಾಮಾಂಜಿನೇಯ ಶೆಟ್ಟಿ‌ ಎಂಬುವವರ ಜಮೀನಿನಲ್ಲಿ ಪವನ ವಿದ್ಯುತ್‌ ಯಂತ್ರದ ಫ್ಯಾನ್‌ ಸ್ಥಾಪಿಸಲಾಗಿತ್ತು. ಆದರೆ, ವಿಪರೀತ ಗಾಳಿಯಿಂದಾಗಿ ಪಕ್ಕದ ವೀರಭದ್ರಪ್ಪ ಎಂಬುವವರ ಹೊಲದಲ್ಲಿ ಫ್ಯಾನ್‌ ಮುರಿದು ಬಿದ್ದಿದೆ. ಹೀಗಾಗಿ ವೀರಭದ್ರಪ್ಪನವರ ಮೆಕ್ಕೆಜೋಳದ ಬೆಳೆಗೆ ಹಾನಿಯಾಗಿದೆ.

ADVERTISEMENT

ಕಂಪನಿಯು ಕೆಲವು ಫ್ಯಾನ್‌ಗಳು ಗ್ರಾಮಕ್ಕೆ‌ ಹತ್ತಿರದಲ್ಲೇ ಸ್ಥಾಪಿಸಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಜಮೀನುಗಳಲ್ಲಿ ರೈತರು ಭಯದಿಂದಲೇ  ಕೃಷಿ ಚಟುವಟಿಕೆ ಮಾಡುವಂಥ ಸ್ಥಿತಿ ಇದೆ.

‘ಏನಾದರೂ ಅನಾಹುತವಾದರೆ ಯಾರು ಹೊಣೆ’ ಎಂದು ಕಾದರ್‌ ಪಾಷಾ ಎಂಬುವವರು ಪ್ರಶ್ನೆ ಮಾಡಿದ್ದಾರೆ. 

ಇತ್ತೀಚಿನ ಕೆಲ ದಿನಗಳಲ್ಲಿ ಹೀಗೆ ಮುರಿದು ಬಿದ್ದ ಎರಡನೇ ಫ್ಯಾನ್‌ ಇದು. ಇತ್ತೀಚಿಗೆ ಇದೇ ಹೋಬಳಿಯ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಫ್ಯಾನ್‌ ಮುರಿದು ಬಿದ್ದಿತ್ತು.

ಚೋರನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.