ADVERTISEMENT

ಭಾವೈಕ್ಯತೆಯಿಂದ ವಿಶ್ವಶಾಂತಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 13:13 IST
Last Updated 24 ಫೆಬ್ರುವರಿ 2024, 13:13 IST
ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದಲ್ಲಿ ಆಯೋಜಿಸಿದ್ದ ಹರಕೆ ವೀರಭದ್ರೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮವನ್ನು ಗಣ್ಯರು ನೆರವೇರಿಸಿದರು
ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದಲ್ಲಿ ಆಯೋಜಿಸಿದ್ದ ಹರಕೆ ವೀರಭದ್ರೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮವನ್ನು ಗಣ್ಯರು ನೆರವೇರಿಸಿದರು   

ಸಂಡೂರು: ಪ್ರತಿಯೊಬ್ಬರೂ ಧರ್ಮದಲ್ಲಿ ನಂಬಿಕೆ ಇರಿಸಬೇಕು. ಆಗ ಮಾತ್ರ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ತಾಲ್ಲೂಕಿನ ಚೋರನೂರು ಗ್ರಾಮದಲ್ಲಿ ನಡೆದ ಹರಕೆ ವೀರಭದ್ರೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ,ನೂತನ ದೇವಾಲಯ ಉದ್ಘಾಟನೆ ಹಾಗೂ ಅಡ್ಡಪಲ್ಲಕ್ಕಿ ಉತ್ಸವದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಾವೈಕ್ಯತೆಯಿಂದ ಬಾಳಿದಾಗ ಮನುಷ್ಯನು ಶಾಂತಿ, ನೆಮ್ಮದಿ ಪಡೆಯಬಹುದು. ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎನ್ನುವ ರಂಭಾಪುರಿ ಪೀಠದ ಘೋಷವಾಕ್ಯವು ವಿಶ್ವಶಾಂತಿಯನ್ನು ಬಯಸಿದೆ ಎಂದರು.

ಸಿ.ಎಸ್.ನರೇಂದ್ರ ಪಾಟೀಲ, ರಾಂಪುರ ರುದ್ರೇಶ, ಎಚ್.ಎಂ.ಮಂಜುನಾಥ ಮಾತನಾಡಿದರು.

ADVERTISEMENT

ಕೊಟ್ಟೂರು ಕಟ್ಟೆಮನೆ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗರುದ್ರಮುನಿ ಸ್ವಾಮೀಜಿ, ಎಚ್.ಎಂ.ಸಿದ್ದೇಶ, ಸುಧಾಕರ, ಚೋರನೂರು ಕೊಟ್ರಪ್ಪ, ಚನ್ನಬಸಣ್ಣ, ಟಿ.ಜಿ.ಸಿದ್ದೇಶ, ಜಿ.ಟಿ.ಪಂಪಾಪತಿ, ಶುಭಾದೇವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.