ADVERTISEMENT

ಈ ಬಾರಿ ಪ್ರೇಮಿಗಳ ದಿನದ ಪ್ರಯುಕ್ತ 2.90 ಕೋಟಿ ಗುಲಾಬಿ ಹೂವು ವಿದೇಶಕ್ಕೆ ರಫ್ತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 15:34 IST
Last Updated 16 ಫೆಬ್ರುವರಿ 2024, 15:34 IST
ಪ್ರೇಮಿಗಳ ದಿನದ ಅಂಗವಾಗಿ ಮಾರುಕಟ್ಟೆಗೆ ಗುಲಾಬಿ ಹೂವು ಸಾಗಿಸಲು ಜೋಡಿಸಿಟ್ಟಿದ್ದ ಮುನೇಗೌಡ
ಪ್ರೇಮಿಗಳ ದಿನದ ಅಂಗವಾಗಿ ಮಾರುಕಟ್ಟೆಗೆ ಗುಲಾಬಿ ಹೂವು ಸಾಗಿಸಲು ಜೋಡಿಸಿಟ್ಟಿದ್ದ ಮುನೇಗೌಡ   

ದೇವನಹಳ್ಳಿ: ಈ ಬಾರಿ ಪ್ರೇಮಿಗಳ ದಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2.90 ಕೋಟಿ ಗುಲಾಬಿ ಹೂವುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 

12.22 ಲಕ್ಷ ಕೆ.ಜಿ ತೂಕದ ಗುಲಾಬಿ ಹೂಗಳನ್ನು ಹೊರ ದೇಶಗಳಿಗೆ ರಫ್ತು ಮಾಡಲಾಗಿದೆ. ಕಳೆದ ಬಾರಿ 1.40 ಕೋಟಿ ಗುಲಾಬಿ ಹೂವುಗಳನ್ನು ರವಾನಿಸಲಾಗಿತ್ತು. ಈ ಬಾರಿ ಶೇ 108 ರಷ್ಟು ಹೆಚ್ಚಿನ ಗುಲಾಬಿಗಳನ್ನು ರಫ್ತು ಮಾಡಲಾಗಿದೆ. 

ಕ್ವಾಲಾಲಂಪುರ, ಸಿಂಗಪುರ, ಕುವೈತ್, ಮನೀಲಾ ಮತ್ತು ಶಾರ್ಜಾ ಮತ್ತು ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ ಮತ್ತು ಜೈಪುರಗೆ  ಅತಿ ಹೆಚ್ಚು ಗುಲಾಬಿ ರವಾನಿಸಲಾಗಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ADVERTISEMENT

ಗುಲಾಬಿ ಹೂವುಗಳ ತಾಜಾತನ ಕಾಪಾಡಲು ಶಿಥಿಲೀಕರಣ ಘಟಕಗಳಲ್ಲಿ ಇಟ್ಟು ಗುಣಮಟ್ಟದ ತಾಜಾ ಹೂವುಗಳನ್ನು ರಫ್ತು ಮಾಡಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.