ADVERTISEMENT

ಆನೇಕಲ್: ಯಲ್ಲಮ್ಮ ದೇಗುಲ ಜೀರ್ಣೋದ್ಧಾರಕ್ಕೆ ಚಾಲನೆ

ಹೆನ್ನಾಗರದಲ್ಲಿ ₹2 ಕೋಟಿ ವೆಚ್ಚೆದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 6:11 IST
Last Updated 23 ಫೆಬ್ರುವರಿ 2024, 6:11 IST
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ಕಾಮಗಾರಿಯನ್ನು ವಿವಿಧ ಶ್ರೀಗಳು ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ಕಾಮಗಾರಿಯನ್ನು ವಿವಿಧ ಶ್ರೀಗಳು ಉದ್ಘಾಟಿಸಿದರು   

ಆನೇಕಲ್: ಜಿಗಣಿ ಹೋಬಳಿಯ ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಗುರುವಾರ‌ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಭೂಮಿಪೂಜೆ ನಡೆಯಿತು.

ದಾನಿಗಳು ನೀಡಿದ ದೇಣಿಗೆಯಿಂದ ಯಲ್ಲಮ್ಮ ದೇವಿ ಮತ್ತು ಗದ್ದಿಗೆ ಜ್ಯೋತಿಲಿಂಗ ಸ್ವಾಮಿಗಳ ಸೇವಾ ಟ್ರಸ್ಟ್‌ ಅಂದಾಜು ₹2ಕೋಟಿ ವೆಚ್ಚದಲ್ಲಿ ಹೆನ್ನಾಗರ ಯಲ್ಲಮ್ಮ ದೇವಾಲಯ ಅಭಿವೃದ್ಧಿ ಪಡಿಸುತ್ತಿದೆ.

ರಾಜಗೋಪುರ, ಗರ್ಭಗುಡಿ, ಮೈಲಾರಲಿಂಗ ಗರ್ಭಗುಡಿ, ಪರುಶುರಾಮ ಗರ್ಭಗುಡಿ, ನವಗ್ರಹ ಪ್ರತಿಷ್ಠಾಪನೆ, ಗೋಶಾಲೆ, ವೃದ್ಧಾಶ್ರಮ, ಉದ್ಯಾನ, ಗದ್ದಿಗೆ ಜ್ಯೋತಿಲಿಂಗ ಸ್ವಾಮಿಗಳ ಗದ್ದುಗೆ ಅಭಿವೃದ್ಧಿ ಸೇರಿದಂತೆ ದೇವಾಲಯದ ಸಮಗ್ರ ಅಭಿವೃದ್ಧಿ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಜಿ.ಸುರೇಶ್ ತಿಳಿಸಿದರು.

ADVERTISEMENT

ಕನಕ ಗುರುಪೀಠದ ನಿರಂಜನಾಂದಪುರಿ ಸ್ವಾಮೀಜಿ, ಬೆಳ್ಳಾವಿ ಮಠದ ಮಹಂತ ಶಿವಾಚಾರ್ಯರು, ಹಾರಗದ್ದೆ ರಾಜರಾಜೇಶ್ವರಿ ದೇವಾಲಯದ ಶಿವಕುಮಾರ ಸ್ವಾಮೀಜಿ, ಗುಮ್ಮಳಾಪುರ ಮಠದ ಶಿವಾನಂದ ಶಿವಾಚಾರ್ಯರು, ವೇಮನ ಪೀಠದ ವೇಮನಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಯಂದಿರುವ ಮಕ್ಕಳಿಗೆ ಮನೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಪಾಠ ಮಾಡಬೇಕು ಎಂದು ಕನಕ ಗುರುಪೀಠದ ನಿರಂಜನಾಂದಪುರಿ ಸ್ವಾಮೀಜಿ ಸಲಹೆ ಮಾಡಿದರು. ಒಂದು ವರ್ಷದೊಳಗೆ ದೇವಾಲಯದ ಕುಂಭಾಭಿಷೇಕ ನಡೆಯುವಂತಾಗಲಿ ಎಂದು ಹಾರೈಸಿದರು.

ಹೆನ್ನಾಗರದ ಯಲ್ಲಮ್ಮ ದೇವಿಗೆ ಐದು ಶತಮಾನಗಳ ಇತಿಹಾಸವಿದೆ. ಜ್ಯೋತಿಲಿಂಗ ಸ್ವಾಮಿ ಸವದತ್ತಿಯಲ್ಲಿ ತಪಸ್ಸು ಮಾಡಿ ಯಲ್ಲಮ್ಮ ದೇವಿ ಸ್ಥಾಪನೆ ಮಾಡಿದ್ದಾರೆ. ಹೆನ್ನಾಗರ ಯಲ್ಲಮ್ಮ ದೇವಿಯ ಶಕ್ತಿ ಈ ಭಾಗದಲ್ಲಿದೆ ಎಂದು ಬೆಳ್ಳಾವಿ ಮಠದ ಮಹಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರಾಜ್ಯದ ವಿವಿಧೆಡೆ ಜ್ಯೋತಿಲಿಂಗ ಸ್ವಾಮೀಜಿ ಭಕ್ತರಿದ್ದಾರೆ ಎಂದರು.

ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಾಲಯದ ಜೀರ್ಣೋದ್ಧಾರ ಭೂಮಿ ಪೂಜೆ ನಡೆಸಲಾಯಿತು

ಗದಗ ಜಿಲ್ಲೆಯ ಶಿರಹಟ್ಟಿ ಫಕಿರೇಶ್ವರ ಮಠದಿಂದ ಜ್ಯೋತಿಲಿಂಗ ಸ್ವಾಮೀಜಿ, ಸಿದ್ದಪ್ಪಾಜಿ, ಮರಿಸ್ವಾಮಿ, ಮಸ್ತಾನ್‌ಸಾಬ್‌, ಹಜರತ್‌ ಷರೀಫ್‌ ಈ ಐವರು ಮಹನೀಯರು ಬೆಂಗಳೂರಿನ ಕಡೆ ಬಂದರೆಂದು ದಾಖಲೆಗಳಿವೆ ಎಂದು ಹಾರಗದ್ದೆ ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಶಿವಕುಮಾರ ಸ್ವಾಮೀಜಿ ಹೇಳಿದರು.

ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು

ಗುಮ್ಮಳಾಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವೇಮನ ಮಹಾಪೀಠದ ವೇಮನಾನಂದ ಸ್ವಾಮೀಜಿ, ಬಮೂಲ್‌ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್‌, ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯ ಟ್ರಸ್ಟ್‌ ಅಧ್ಯಕ್ಷ ಸುರೇಶ್‌ ರೆಡ್ಡಿ, ಪ್ರಚಾರ ಸಮಿತಿಯ ಆರ್‌.ಕೆ.ಕೇಶವರೆಡ್ಡಿ, ಜಿ.ಮುನಿರಾಜು, ಟ್ರಸ್ಟ್‌ ಖಜಾಂಚಿ ರಮೇಶ್‌, ಪದಾಧಿಕಾರಿಗಳಾದ ನಾಗೇಶ್‌ ಜ್ಯೋತಯ್ಯ, ಧರ್ಮವೀರ, ಸುರೇಶ್‌, ಸತೀಶ್‌ರೆಡ್ಡಿ, ಪ್ರಭಾಕರರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಎಂ.ಮಹೇಶ್‌ ರೆಡ್ಡಿ, ಸೋಮಶೇಖರರೆಡ್ಡಿ, ಹಾ.ವೇ.ವೆಂಕಟೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.