ADVERTISEMENT

ಹಣ ಡ್ರಾ ಮಾಡಲು ಹೋಗಿದ್ದ ರೈತನ ಎಂಟಿಎಂ ಕಾರ್ಡ್ ಕದ್ದು ಚಿನ್ನ ಖರೀದಿ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 9:08 IST
Last Updated 29 ಜನವರಿ 2024, 9:08 IST
<div class="paragraphs"><p>ಹಣ ಕಳೆದುಕೊಂಡ ರಾಜಣ್ಣ</p></div>

ಹಣ ಕಳೆದುಕೊಂಡ ರಾಜಣ್ಣ

   

ವಿಜಯಪುರ (ದೇವನಹಳ್ಳಿ): ಎಟಿಎಂವೊಂದರಲ್ಲಿ ಹಣ ತೆಗೆದುಕೊಳ್ಳುಲು ಹೋಗಿದ್ದ ರೈತರೊಬ್ಬರನ್ನು ಯಾಮಾರಿಸಿದ ವಂಚಕರು ಅವರದೇ ಎಟಿಎಂ ಕಾರ್ಡ್ ನಿಂದ ಚಿನ್ನ ಖರೀದಿಸಿದ್ದಾರೆ.

ಭಟ್ರೇನಹಳ್ಳಿ ರಾಜಣ್ಣ ಎಂಬ ರೈತ ಶುಕ್ರವಾರ ಪಟ್ಟಣದ ಹಳೆ ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೋಗಿದ್ದರು.

ADVERTISEMENT

ಹಣ ಡ್ರಾ ಮಾಡಲು ಬಾರದಿದ್ದಾಗ ಅಲ್ಲೆ ಇದ್ದ ಅಪರಿಚಿತ ವ್ಯಕ್ತಿಯೊಬ್ಬರ ಕೈಗೆ ಎಟಿಎಂ ಕಾರ್ಡ್ ಕೊಟ್ಟು ಹಣ ತೆಗೆದು ಕೊಡುವಂತೆ ಕೇಳಿದ್ದಾರೆ. 10 ಸಾವಿರ ಹಣ ಡ್ರಾ ಮಾಡಿಕೊಟ್ಟ ಆತ ಬೇರೆ ಎಟಿಎಂ ಕಾರ್ಡ್ ಕೊಟ್ಟು ತೆರಳಿದ್ದಾನೆ.

ತಕ್ಷಣ ಎಚ್ಚೆತ್ತುಕೊಂಡ ರಾಜಣ್ಣ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ.

ಪೊಲೀಸರು ಸೂಚನೆ ಮೇರೆಗೆ ಕೆನರಾ ಬ್ಯಾಂಕಿಗೆ ಹೋಗಿ ಎಟಿಎಂ ಕಾರ್ಡ್ ಲಾಕ್ ಮಾಡಿಸುವಷ್ಟರಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಎಟಿಎಂ ಕಾರ್ಡ್ ಬಳಸಿ ₹40,500 ಮೌಲ್ಯದ ಚಿನ್ನ ಖರೀದಿಸಲಾಗಿದೆ ಎಂದು ಗೊತ್ತಾಗಿದೆ.

ಪೊಲೀಸ್ ಠಾಣೆಯಲ್ಲಿ ರಾಜಣ್ಣ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.